ಚೆನ್ನೈ ಜಲಪ್ರಳಯ: ವಿಮಾನದ ಚಕ್ರದೆಡೆಯಲ್ಲಿ ಅವಿತ ಕರಿನಾಗರಹಾವು!
ಚೆನ್ನೈ ಜಲಪ್ರಳಯದಿಂದ ರಕ್ಷಣೆ ಪಡೆಯುವುದಕ್ಕಾಗಿ ನಾಗರ ಹಾವು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನದ ಚಕ್ರದೆಡೆಯಲ್ಲಿ ಅವಿತುಕೊಂಡಿತ್ತು!

Published On :
ಚೆನ್ನೈ: ಚೆನ್ನೈ ಜಲಪ್ರಳಯದಿಂದ ರಕ್ಷಣೆ ಪಡೆಯುವುದಕ್ಕಾಗಿ ಕರಿನಾಗರ ಹಾವು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನದ ಚಕ್ರದೆಡೆಯಲ್ಲಿ ಅವಿತುಕೊಂಡಿತ್ತು!
ಜಲ ಪ್ರಳಯದ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಳಿಸಿತ್ತು. ಇದೀಗ ಮಳೆ ನಿಂತ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಶುಚಿಗೊಳಿಸಿದಾಗ ನಾಗರಹಾವು ವಿಮಾನದ ಚಕ್ರ ಮಧ್ಯೆ ಸುರಕ್ಷಿತ ಜಾಗ ಕಂಡುಕೊಂಡಿರುವುದು ಬೆಳಕಿಗೆ ಬಂದಿದೆ. ಚಕ್ರದೆಡೆಯಲ್ಲಿದ್ದ ಹಾವನ್ನು ಹೊರಗಟ್ಟಲು ತುಂಬ ಹೊತ್ತು ಪ್ರಯತ್ನಿಸಿದ ನಂತರ ಅಧಿಕೃತರು ನಾಗರಹಾವನ್ನು ಅಲ್ಲಿಂದ ಓಡಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ವಿಮಾನ ನಿಲ್ದಾಣ ಶುಚಿಗೊಳಿಸುವ ವೇಳೆ ಹಾವು ಕಚ್ಚಿ ಇಬ್ಬರು ಕೆಲಸಗಾರರು ಸಾವನ್ನಪ್ಪಿದ್ದರು.
ವಿಮಾನದ ಚಕ್ರದ ಮಧ್ಯೆ ಅವಿತಿರುವ ಕರಿನಾಗರ ಹಾವನ್ನು ಓಡಿಸುತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ನೋಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


