ದೇಶ

ಹೈಪ್ರೋಫೈಲ್ ಗುದ್ದೋಡು ಪ್ರಕರಣಗಳು

ಪುರು ರಾಜ್‍ಕುಮಾರ್ (1993) ಬಾಲಿವುಡ್ ನಟ ರಾಜ್‍ಕುಮಾರ್ ಅವರ ಪುತ್ರ ಪುರು ರಾಜ್‍ಕುಮಾರ್ ಅವರು 1993ರ...

ಹೈಪ್ರೋಫೈಲ್ ಗುದ್ದೋಡು ಪ್ರಕರಣಗಳು
ಸಲ್ಮಾನ್ ಖಾನ್
Published On :
1. ಪುರು ರಾಜ್‍ಕುಮಾರ್ (1993) ಬಾಲಿವುಡ್ ನಟ ರಾಜ್‍ಕುಮಾರ್ ಅವರ ಪುತ್ರ ಪುರು ರಾಜ್‍ಕುಮಾರ್ ಅವರು 1993ರ ಡಿಸೆಂಬರ್‍ನಲ್ಲಿ ಬಾಂದ್ರಾದ ಫುಟ್‍ಪಾತ್‍ನಲ್ಲಿ ಮಲಗಿದ್ದ 8 ಮಂದಿಯ ಮೇಲೆ ಕಾರು ಚಲಾಯಿಸಿದ್ದರು. ಪರಿಣಾಮ ಮೂವರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿದ್ದರು. ಆದರೆ, ಇವರು ದಂಡ ಕಟ್ಟಿ, ಕೋರ್ಟ್‍ನ ಹೊರಗೆ ಪ್ರಕರಣವನ್ನುಇತ್ಯರ್ಥಗೊಳಿಸಿದರು. ಹೀಗಾಗಿ ಜೈಲು ಶಿಕ್ಷೆಯಿಂದ ಪಾರಾದರು. 
2. ಸಂಜೀವ್ ನಂದಾ (1999) ಕೇಸ್ ಅಡ್ಮಿರಲ್ ಎಸ್‍ಎಂ ನಂದಾ ಅವರ ಮೊಮ್ಮಗ ಸಂಜೀವ್ ನಂದಾ ಅವರು 1999ರ ಜ.10ರಂದು ದೆಹಲಿಯ ಲೋಧಿ ರಸ್ತೆಯ ಚೆಕ್‍ಪಾಯಿಂಟ್ ನಲ್ಲಿ ತಮ್ಮ ಬಿಎಂಡಬ್ಲ್ಯೂ ಕಾರನ್ನು ಡಿಕ್ಕಿ ಹೊಡೆಸಿ, ಮೂವರು ಪೊಲೀಸರು ಸೇರಿದಂತೆ 6 ಮಂದಿಯ ಸಾವಿಗೆ ಕಾರಣರಾಗಿದ್ದರು. ಆರಂಭದಲ್ಲಿ ವಿಚಾರಣಾ ನ್ಯಾಯಾಲಯವು ನಂದಾರನ್ನು ಖುಲಾಸೆಗೊಳಿಸಿತ್ತು. ಆದರೆ, ಈ ತೀರ್ಪಿನ ವಿರುದ್ಧದ ಆಕ್ರೋಶವು ವ್ಯಾಪಿಸಿದ ಬಳಿಕ, 2008ರಲ್ಲಿ ಮರು ವಿಚಾರಣೆ ನಡೆಸಿ, ನಂದಾ ಅವರನ್ನು ದೋಷಿ ಎಂದು ಕೋರ್ಟ್ ತೀರ್ಪಿತ್ತಿತು. ಜತೆಗೆ 2 ವರ್ಷ ಜೈಲುಶಿಕ್ಷೆಯನ್ನೂ ವಿಧಿಸಿತು.
3. ಅಲಿಸ್ಟೇರ್ ಪಿರೇರಾ (2006) ಕೇಸ್ ರಿಯಲ್ ಎಸ್ಟೇಟ್ ದಿಗ್ಗಜರ ಕುಟುಂಬದ ಕುಡಿ ಅಲಿಸ್ಟೇರ್ ಆ್ಯಂಥೊನಿ ಪಿರೇರಾ ಅವರು 2006ರ ನ.12ರಂದು ತಮ್ಮ ಟೊಯೋಟಾ ಕೊರೋಲಾ ಕಾರನ್ನು ಮುಂಬೈನ ಕಾರ್ಟರ್ ರಸ್ತೆ ಬದಿ ಮಲಗಿದ್ದ ಕಟ್ಟಡ ಕಾರ್ಮಿಕರ ಮೇಲೆ ಹರಿಸಿದ್ದರು. ಪರಿಣಾಮ 7 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದರು. ಸ್ಥಳೀಯ ಕೋರ್ಟ್ ಪಿರೇರಾರಿಗೆ 6 ತಿಂಗಳ ಜೈಲು ವಿಧಿಸಿತು. ಆದರೆ, ಇಲ್ಲೂ ಸಾರ್ವಜನಿಕ ಹಾಗೂ ಮಾಧ್ಯಮ ವಲಯದಿಂದ ಆಕ್ಷೇಪ ವ್ಯಕ್ತವಾದ ಕಾರಣ, ಬಾಂಬೆ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ಜೈಲುಶಿಕ್ಷೆಯನ್ನು 3 ವರ್ಷಗಳಿಗೆ ವಿಸ್ತರಿಸಿತು.
4. ನೀಲ್ ಚಟರ್ಜಿ (2006) ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‍ನ ಮಾಜಿ ಹಿರಿಯ ಕಾರ್ಯಕಾರಿ ಅಧಿಕಾರಿಯಾಗಿದ್ದ ನೀಲ್ ಚಟರ್ಜಿ ಅವರು 2006ರಲ್ಲಿ ತಮ್ಮ ಕಾರಿನ ನಿಯಂತ್ರಣ ಕಳೆದುಕೊಂಡು ಸೆಕ್ಯೂರಿಟಿ ಗಾಡ್ರ್ ಗೆ ಗುದ್ದಿದ ಪರಿಣಾಮ, ಗಾರ್ಡ್ ಅಲ್ಲೇ ಸಾವನ್ನಪ್ಪಿದ್ದರು. ಈ ಕೇಸು ಇನ್ನೂ ಇತ್ಯರ್ಥವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.