ದೇಶ

ಸಹೋದರರ ಕೊಲೆ ಪ್ರಕರಣ: ಆರ್ ಜೆಡಿ ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ

ಸಹೋದರರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ರಾಷ್ಟ್ರೀಯ ಜನತಾದಳದ ಮಾಜಿ ಸಂಸದ ಮೊಹಮ್ಮದ್‌ ಶಾಹಬುದ್ದಿನ್‌ ಮತ್ತು ಅವರ...

ಸಹೋದರರ ಕೊಲೆ ಪ್ರಕರಣ: ಆರ್ ಜೆಡಿ ಮಾಜಿ ಸಂಸದನಿಗೆ ಜೀವಾವಧಿ ಶಿಕ್ಷೆ
ಮೊಹಮ್ಮದ್‌ ಶಾಹಬುದ್ದಿನ್‌
Published On :

ಸಿವಾನ್‌: ಸಹೋದರರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ರಾಷ್ಟ್ರೀಯ ಜನತಾದಳದ ಮಾಜಿ ಸಂಸದ ಮೊಹಮ್ಮದ್‌ ಶಾಹಬುದ್ದಿನ್‌ ಮತ್ತು ಅವರ ಮೂವರು ಸಹಚರರಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಜಿಲ್ಲಾ  ನ್ಯಾಯಾಧೀಶರಾದ ಅಜಯ್‌ ಕುಮಾರ್‌ ಶ್ರೀವಾಸ್ತವ ಅವರು ಶುಕ್ರವಾರ ತೀರ್ಪು ಪ್ರಕಟಿಸಿದರು.  ಇತರ ಮೂವರು ಅಪರಾಧಿಗಳಾದ ರಾಜಕುಮಾರ್‌ ಶಾಹ, ಶೇಕ್‌ ಅಸ್ಲಾಂ, ಆರೀಪ್‌ ಹುಸೇನ್‌ ಅವರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ.

2004 ರಲ್ಲಿ  ಮಾಜಿ ಸಂಸದ ಶಹಾಬುದ್ದಿನ್‌ ತನ್ನ ಸಹಚರರ ಜತೆ ಸೇರಿ ಸಹೋದರರಾದ ಗಿರೀಶ್‌ ಮತ್ತು ಸತೀಶ್‌ ಎಂಬುವರ ಮೇಲೆ ಆ್ಯಸಿಡ್‌ ಸುರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳಿಗೆ ಜೀವಾಧಿ ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಮೃತರ ಶವಗಳು ಕೂಡ ದೊರೆತಿರಲಿಲ್ಲ., ಮೃತ ಸಹೋದರರ ತಾಯಿ ಕಲಾವತಿ ದೇವಿ ಈ ಸಂಬಂಧ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.