ಭೂಗತ ಪಾತಕಿ ದಾವೂದ್ ಗಿಂತಲೂ ಅಜಂ ಖಾನ್ ಭಾರೀ ಡೇಂಜರ್: ಶಿವಸೇನೆ
ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಭಾರೀ ಅಪಾಯಕಾರಿ ವ್ಯಕ್ತಿಯೆಂದು ಶಿವಸೇನೆ ಮಂಗಳವಾರ ಹೇಳಿದೆ...

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಭಾರೀ ಅಪಾಯಕಾರಿ ವ್ಯಕ್ತಿಯೆಂದು ಶಿವಸೇನೆ ಮಂಗಳವಾರ ಹೇಳಿದೆ.
ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿರುವ ಶಿವಸೇನೆಯು, ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಉತ್ತರ ಪ್ರದೇಶದ ಸಚಿವ ಅಜಂ ಖಾನ್ ಭಾರೀ ಅಪಾಯಕಾರಿ ವ್ಯಕ್ತಿಯೆಂದು ಹೇಳಿಕೊಂಡಿದೆ. ಅಲ್ಲದೆ, ದಾದ್ರಿ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ವಿಶ್ವಸಂಸ್ಥೆಗೆ ಅಜಂಖಾನ್ ಪತ್ರ ಬರೆದಿರುವುದನ್ನು ಶಿವಸೇನೆ ಕಟುವಾಗಿ ಟೀಕಿಸಿದೆ.
ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲಾಗುತ್ತಿದ್ದು, ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಆರ್ಎಸ್ಎಸ್ ಸಂಘಟನೆ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ ಎಂದು ಅಜಂ ಖಾನ್ ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.
ಇದಲ್ಲದೇ, ಮೂರು ದಿನಗಳ ಹಿಂದಷ್ಟೇ ಬಾಬ್ರಿ ಮಸೀದಿ ಧ್ವಂಸ'ದ 23ನೇ ವರ್ಷಾಚರಣೆ ಅಂಗವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಜಂ ಖಾನ್ ಅವರು, ಶಿವಸೇನೆ ತಾಜ್ ಮಹಲನ್ನು ಕೆಡವಿ ನೆಲ ಸಮ ಮಾಡಿ ಶಿವನ ದೇಗುಲ ಕಟ್ಟಲು ಮುಂದಾದರೆ ಅದಕ್ಕೆ ನಾವು ನೆರವು ನೀಡುತ್ತೇವೆಂದು ವ್ಯಂಗ್ಯವಾಡಿದ್ದರು.
ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಶಿವಸೇನೆ ಇದೀಗ ಅಜಂಖಾನ್ ವಿರುದ್ಧ ಕಿಡಿಕಾರಿದ್ದು, ದಾವೂದ್ ಗಿಂತಲೂ ಅಜಂಖಾನ್ ಅಪಾಯಕಾರಿ ವ್ಯಕ್ತಿಯೆಂದು ತನ್ನ ಮುಖವಾಣಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


