ದೇಶ

ಕುಸಿಯದ ಮೋದಿ ಜನಪ್ರಿಯತೆ

ಬಿಹಾರ ಚುನಾವಣೆಯ ಹಿನ್ನಡೆ ನಂತರವೂ, ಜನಪ್ರಿಯತೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ...

ಕುಸಿಯದ ಮೋದಿ ಜನಪ್ರಿಯತೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಬಿಹಾರ ಚುನಾವಣೆಯ ಹಿನ್ನಡೆ ನಂತರವೂ, ಜನಪ್ರಿಯತೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ.

ಮಿಂಟ್ ದಿನಪತ್ರಿಕೆ ಮತ್ತು ಇನ್‍ಸ್ಟಾವಾಣಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.74ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇದರರ್ಥ, ಮೋದಿ ಅವರಿಂದ ಜನ ಇನ್ನಷ್ಟು ಸಾಧನೆಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ, ಮೋದಿಗೆ ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನೂ ಇದು ಸೂಚಿಸುತ್ತದೆ ಎನ್ನುತ್ತಾರೆ ಜೈನ್ ವಿವಿ ಕುಲಪತಿ ಸಂದೀಪ್ ಶಾಸ್ತ್ರಿ. ಕಳೆದ ವರ್ಷ  ಆಗಸ್ಟ್ ನಲ್ಲಿ ಮೋದಿ ಜನಪ್ರಿಯತೆ ಪ್ರಮಾಣ ಶೇ.82ರಷ್ಟಿತ್ತು. ಈ ವರ್ಷದ ಆಗಸ್ಟ್ ನಲ್ಲಿ ಜನಪ್ರಿಯತೆ ಶೇ.79ಕ್ಕೆ ಕುಸಿದಿತ್ತು. ಮೇ ತಿಂಗಳಲ್ಲಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಒಂದು  ವರ್ಷ ಪೂರೈಸಿದಾಗ ಮೋದಿ ಜನಪ್ರಿಯತೆ ಶೇ.74ಕ್ಕೆ ಇಳಿದಿತ್ತು.

ನವೆಂಬರ್‍ನ ಸಮೀಕ್ಷೆಯಲ್ಲಿ ಅದೇ ಪ್ರಮಾಣವನ್ನು ಕಾಯ್ದುಕೊಂಡಿದೆ. ಇನ್ನು, ಎನ್‍ಡಿಎ ಜನಪ್ರಿಯತೆ ಶೇ.70ರಷ್ಟಿದೆ ಎಂದಿದೆ ಸಮೀಕ್ಷೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಈ ಸಮೀಕ್ಷೆ ಫಲಿತಾಂಶವನ್ನು ತಳ್ಳಿಹಾಕಿದ್ದು, ಅದನ್ನು ದೋಷಪೂರಿತ ಎಂದಿದೆ. ಮೋದಿ ಜನಪ್ರಿಯತೆ ಸಾಕಷ್ಟು ಕುಸಿದಿದೆ. ಕೆಲವು ಮಸೂದೆಗಳಿಗೆ ಸಂಬಂಧಿಸಿದಂತೆ ಅವರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆಗೆ ಮುಂದಾಗಿದ್ದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.