ಮನಮೋಹನ್ ಸಿಂಗ್ ನರೇಂದ್ರ ಮೋದಿಗಿಂತ ಉತ್ತಮ ಪ್ರಧಾನಿಯಾಗಿದ್ದರು!
ಭಾರತ ಕಂಡ ಅತೀ ಉತ್ತಮ ರಾಜಕಾರಣಿ ವಾಜಪೇಯಿ. ಅವರಿಂದ ಪ್ರಧಾನಿ ನರೇಂದ್ರ ಮೋದಿ ರಾಜಕೀಯವನ್ನು ಕಲಿಯಲಿ...

Published On :
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಕಲೆಯನ್ನು ಕಲಿಯಬೇಕಾಗಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ 'ರಾ' (ರಿಸರ್ಚ್ ಆ್ಯಂಡ್ ಅನಾಲಿಸಿಸ್ ಘಟಕ-ಆರ್‌ಆ್ಯಂಡ್ ಎಡಬ್ಲ್ಯೂ) ಮಾಜಿ ಮುಖ್ಯಸ್ಥ ಅಮರ್ಜಿತ್ ಸಿಂಗ್ ದುಲಾತ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಮಾಧ್ಯಮವೊಂದರಲ್ಲಿ ಮಾತಾಡಿದ ದುಲಾತ್, ಜವಾಹರ್‌ಲಾಲ್ ನೆಹರೂ ನಂತರ ಅಟಲ್ ಬಿಹಾರಿ ವಾಜಪೇಯಿ ಮಾತ್ರವೇ ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಕಾಶ್ಮೀರ್- ದ ವಾಜಪೇಯಿ ಇಯರ್ಸ್ ಎಂಬ ಪುಸ್ತಕದ ಲೇಖಕರಾದ ದುಲಾತ್, ಪುಸ್ತಕದ ಬಗ್ಗೆ ಮಾತಾಡುತ್ತಾ ವಾಜಪೇಯಿ ಒಬ್ಬ ನಾಯಕ ಮತ್ತು ರಾಜಕಾರಣಿಯಾಗಿದ್ದರು. ಮೋದಿಯವರು ವಾಜಪೇಯಿ ಅವರಿಂದ ಕಲಿಯಬೇಕಾದುದು ಸಾಕಷ್ಟಿದೆ. ಭಾರತ ಕಂಡ ಅತೀ ಉತ್ತಮ ರಾಜಕಾರಣಿ ವಾಜಪೇಯಿ. ಅವರಿಂದ ಮೋದಿ ರಾಜಕೀಯವನ್ನು ಕಲಿಯಲಿ ಎಂಬುದು ನನ್ನ ವಿನಂತಿ ಎಂದಿದ್ದಾರೆ.
1965ರಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ದುಲಾತ್, ಮನಮೋಹನ್ ಸಿಂಗ್ ಮೋದಿಗಿಂತ ಉತ್ತಮ ಪ್ರಧಾನಿಯಾಗಿದ್ದರು. ಯಾಕೆಂದರೆ ಸಿಂಗ್ ಅವರು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಶ್ರಮ ವಹಿಸಿದ್ದರು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿJammu and Kashmirಜವಾಹರ್‌ಲಾಲ್ ನೆಹರೂManmohan Singhಮನಮೋಹನ್ ಸಿಂಗ್Atal Bihari VajpayeeAmarjit Singh Dulatಅಮರ್ಜಿತ್ ಸಿಂಗ್ ದುಲಾತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


