ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಲೈಂಗಿಕ ಆರೋಪ?
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೋಲಾರ್ ಪ್ರಕರಣ ವಿವಾದದ ರುವಾರಿ ಸರಿತಾ ಜತೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂಬ ಆರೋಪ...

Published On :
ಕೊಚ್ಚಿ: ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೋಲಾರ್ ಪ್ರಕರಣ ವಿವಾದದ ರುವಾರಿ ಸರಿತಾ ಜತೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸೋಲಾರ್ ಪ್ರಕರಣದ ಆರೋಪಿ ಬಿಜು ರಾಧಾಕೃಷ್ಣನ್ ಸೋಲಾರ್ ಕಮಿಷನ್‌ಗೆ ನೀಡಿದ ಹೇಳಿಕೆಯಲ್ಲಿ ಈ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಮಾತ್ರವಲ್ಲದೆ ಸಚಿವರುಗಳಾದ ಶಿಬು ಬೇಬಿ ಜಾನ್, ಎಪಿ ಅನಿಲ್ ಕುಮಾರ್, ಹೈಬಿ ಈಡನ್ ಎಂಎಲ್‌ಎ, ಆರ್ಯಾಡನ್ ಶೌಖತ್, ಅನಿಲ್ ಕುಮಾರ್ ಅವರ ಪಿಎ ನಸರುಲ್ಲಾ ಮೊದಲಾದವರು ಸರಿತಾ ಜತೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಬಿಜು ಹೇಳಿದ್ದಾರೆ.
ಇದರ ದೃಶ್ಯಗಳನ್ನು ಸರಿತಾ ಅವರು ರೆಕಾರ್ಡ್ ಮಾಡಿಟ್ಟಿದ್ದರು. ಅದನ್ನು ನಾನು ನೋಡಿದ್ದೇನೆ. ಆದರೆ ಮುಖ್ಯಮಂತ್ರಿಯವರನ್ನು ಆ ದೃಶ್ಯಗಳಲ್ಲಿ ನೋಡಿ ನಾನೇ ನಂಬದಾದೆ. ಇತರರು ಸರಿತಾರೊಂದಿಗೆ ಇಂದ ದೃಶ್ಯಗಳನ್ನು ನಾನು ಮುಖ್ಯಮಂತ್ರಿಗೆ ತೋರಿಸಿದ್ದೇನೆ. ಆದರೆ ಅವರಿರುವ ದೃಶ್ಯಗಳನ್ನು ತೋರಿಸಲು ನನಗೆ ಸಾಧ್ಯವಾಗಲಿಲ್ಲ. ಸಮಿತಿ ಸಾಕ್ಷ್ಯ ಕೇಳಿದರೆ ನಾನು ಆ ಎಲ್ಲ ದೃಶ್ಯಗಳನ್ನು ಹಾಜರು ಪಡಿಸಲು ಸಿದ್ಧ ಎಂದಿದ್ದಾರೆ ಬಿಜು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Oommen Chandyಉಮ್ಮನ್ ಚಾಂಡಿSarithaBiju Radhakrishnanvideo clipSolar scamಬಿಜು ರಾಧಾಕೃಷ್ಣನ್ಲೈಂಗಿಕ ಸಂಬಂಧಸೋಲಾರ್ ಪ್ರಕರಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


