ದೇಶ

ಕೋಲ್ಕತಾದಲ್ಲಿ ಮತ್ತೊಬ್ಬ ಐಎಸ್‌ಐ ಏಜೆಂಟ್‌ ಬಂಧನ

ಮೂರು ದಿನಗಳ ಹಿಂದಷ್ಟೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗೆ ನಂಟು ಹೊಂದಿದ ಜಾಲವನ್ನು ಪತ್ತೆ ಹಚ್ಚಿದ್ದ ವಿಶೇಷ ಕಾರ್ಯಪಡೆ, ಬುಧವಾರ...

ಕೋಲ್ಕತಾದಲ್ಲಿ ಮತ್ತೊಬ್ಬ ಐಎಸ್‌ಐ ಏಜೆಂಟ್‌ ಬಂಧನ
ಸಾಂದರ್ಭಿಕ ಚಿತ್ರ
Published On :

ಕೋಲ್ಕತಾ: ಮೂರು ದಿನಗಳ ಹಿಂದಷ್ಟೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗೆ ನಂಟು ಹೊಂದಿದ ಜಾಲವನ್ನು ಪತ್ತೆ ಹಚ್ಚಿದ್ದ ವಿಶೇಷ ಕಾರ್ಯಪಡೆ, ಬುಧವಾರ ಕೋಲ್ಕತಾದಲ್ಲಿ ಮತ್ತೊಬ್ಬ ಶಂಕಿತ ಐಎಸ್ಐ ಏಜೆಂಟ್‌ನನ್ನು ಬಂಧಿಸಿದೆ.

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ವಿಶೇಷ ಕಾರ್ಯಪಡೆ, ಕರೆಯಾ ಪೊಲೀಸ್‌ ಠಾಣೆಯ ವ್ಯಾಪ್ತಿಯ ನಿವಾಸಿಯಾಗಿರುವ 59 ವರ್ಷದ ಶೇಖ್ ಬಾದಲ್‌ ನನ್ನು ಬಂಧಿಸಿದೆ.

ಇಂದು ಮಧ್ಯಾಹ್ನ ಬ್ರಬೋರ್ನ್ ರಸ್ತೆಯಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯ ಎದುರಿನ ಫುಟ್‌ಪಾತ್‌ ಮೇಲೆ ನಿಂತಿದ್ದ ಬಾದಲ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿಶೇಷ ಕಾರ್ಯಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೇಖ್ ವಿರುದ್ಧ ಐಪಿಸಿ 120 ಬಿ. 121, 121ಎ, 489ಬಿ ಹಾಗೂ 489 ಸಿ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರವಷ್ಟೇ ಐಎಸ್‌ಐ ಪರ ಗೂಢಚರ್ಯೆ ನಡೆಸಿದ ಆರೋಪದಡಿ ಕೋಲ್ಕತ್ತ ಪೊಲೀಸರ ವಿಶೇಷ ಕಾರ್ಯಪಡೆ ಘಟಕ ಮೂವರನ್ನು ಬಂಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.