2016ನೇ ಸಾಲಿನ ಗೇಟ್ ಪರೀಕ್ಷೆಗೆ ದಾಖಲಾತಿ ಆರಂಭ
ಎಂಜಿನಿಯರಿಂಗ್ ನ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆಗೆ ಸೆಪ್ಟೆಂಬರ್ 1ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು...

ನವದೆಹಲಿ: ಎಂಜಿನಿಯರಿಂಗ್ ನ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆಗೆ ಸೆಪ್ಟೆಂಬರ್ 1ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್ 1ರವರೆಗೆ ಇರುತ್ತದೆ.
ಪರೀಕ್ಷೆ ಮತ್ತು ದಾಖಲಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ www.gate.iisc.ernet.in ಗೆ ಲಾಗಿನ್ ಆಗಬಹುದು.
ಗೇಟ್ 2016ರ ಬಗ್ಗೆ ಸ್ವಲ್ಪ ಮಾಹಿತಿ:
- ಪಠ್ಯಕ್ರಮ ವೆಬ್ ಸೈಟ್ ನಲ್ಲಿ ದೊರಕುತ್ತದೆ.
- ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನ.
- ಪರೀಕ್ಷೆಯ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ನವೆಂಬರ್ 20 ಕಡೆಯ ದಿನ.
- ಆನ್ ಲೈನ್ ಮೂಲಕ ಪ್ರವೇಶ ಪತ್ರ ಪಡೆಯಲು ಕಡೆಯ ದಿನ ಡಿಸೆಂಬರ್ 17.
- 2016ನೇ ಸಾಲಿನ ಗೇಟ್ ಪರೀಕ್ಷೆ 2016, ಜನವರಿ 30ರಿಂದ ಫೆಬ್ರವರಿ 7ರೊಳಗೆ ಶನಿವಾರ ಮತ್ತು ಭಾನುವಾರಫಲಿತಾಂಶ ಪ್ರಕಟ-ಮಾರ್ಚ್ 19, 2016.
- ಈ ವರ್ಷ ಒಟ್ಟು 23 ಪರೀಕ್ಷಾ ಪತ್ರಿಕೆಗಳಿರುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


