ದೇಶ

ನೂತನ ಗೃಹ ಕಾರ್ಯದರ್ಶಿಯಾಗಿ ರಾಜೀವ್ ಮೆಹ್ರಿಶಿ ನೇಮಕ

ಕೇಂದ್ರ ಸರ್ಕಾರ ಆರೇ ತಿಂಗಳಲ್ಲಿ ಗೃಹ ಕಾರ್ಯದರ್ಶಿಯನ್ನು ಬದಲಾವಣೆ ಮಾಡಿದ್ದು, ನೂತನ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್...

ನೂತನ ಗೃಹ ಕಾರ್ಯದರ್ಶಿಯಾಗಿ ರಾಜೀವ್ ಮೆಹ್ರಿಶಿ ನೇಮಕ
ರಾಜೀವ್ ಮೆಹ್ರಿಶಿ
Published On :

ನವದೆಹಲಿ: ಕೇಂದ್ರ ಸರ್ಕಾರ ಆರೇ ತಿಂಗಳಲ್ಲಿ ಗೃಹ ಕಾರ್ಯದರ್ಶಿಯನ್ನು ಬದಲಾವಣೆ ಮಾಡಿದ್ದು, ನೂತನ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಮೆಹ್ರಿಶಿ ಅವರನ್ನು ಸೋಮವಾರ ನೇಮಕ ಮಾಡಿದೆ.

ಕಳೆದ ಫೆಬ್ರುವರಿಯಲ್ಲಿ ಎಲ್.ಸಿ.ಗೋಯಲ್ ಅವರನ್ನು ಗೃಹ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಇದೀಗ ಸರ್ಕಾರ ಅವರ ಸ್ಥಾನಕ್ಕೆ ಮೆಹ್ರಿಶಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ವೈಯಕ್ತಿಕ ಕಾರಣಗಳಿಂದ ಗೋಯಲ್ ಅವರು ಸ್ವಯಂ ನಿವೃತ್ತಿಗೆ ಮಾಡಿದ್ದ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಂಗೀಕರಿಸಿದ್ದಾರೆ ಎಂದು ಪ್ರಧಾನಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

1978ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಮೆಹ್ರಿಶಿ ಅವರು, ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇಂದು ಸೇವೆಯಿಂದ ನಿವೃತ್ತಿಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅವರನ್ನು ಗೃಹ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿ, ನಿವೃತ್ತಿ ಅವಧಿಯನ್ನು ಎರಡು ವರ್ಷ ವಿಸ್ತರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.