ಬ್ಲಡ್ ಡೈಮಂಡ್ ಹಿಂದೆ ಬಿದ್ದ ದಾವೂದ್
ರಿಯಲ್ ಎಸ್ಟೇಟ್, ಲೇವಾದೇವಿ, ಅಕ್ರಮ ಹಣಕಾಸು ವಹಿವಾಟುಗಳ ಮೂಲಕ ತನ್ನ ಭೂಗತ ಸಾಮಾ್ರಜ್ಯ ವಿಸ್ತರಿಕೊಂಡಿರುವ....

ನವದೆಹಲಿ: ರಿಯಲ್ ಎಸ್ಟೇಟ್, ಲೇವಾದೇವಿ, ಅಕ್ರಮ ಹಣಕಾಸು ವಹಿವಾಟುಗಳ ಮೂಲಕ ತನ್ನ ಭೂಗತ ಸಾಮಾ್ರಜ್ಯ ವಿಸ್ತರಿಕೊಂಡಿರುವ ಮೋಸ್ಟ್ ವಾಟೆಂಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಇತ್ತೀಚೆಗೆ `ಬ್ಲಡ್ ಡೈಮಂಡ್' ವಹಿವಾಟು ಮೂಲಕ ದಂಧೆಗೆ ಹೊಸ ಆಯಾಮ ನೀಡಿದ್ದಾನೆ! 1993ರ ಮುಂಬೈ ಸರಣಿ ಸ್ಫೋಪ್ರಕರಣದ ರೂವಾರಿ ದಾವೂದ್‍ನ ಚಲನವಲನಗಳ ಮೇಲೆ ಕಣ್ಣಿಟ್ಟಿರುವ ಭಾರತದ ಗುಪ್ತಚರ ಸಂಸ್ಥೆಗಳಿಗೆ, ಈ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೂಚನೆ ನೀಡಿದ್ದು, ಆತನ ಆಸ್ತಿ-ಪಾಸ್ತಿ ಮುಟ್ಟುಗೋಲು ಸಂಬಂಧ ವಹಿವಾಟಿನ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚಿಸಿದ್ದಾರೆ ಎಂದು ದ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದಾವೂದ್ ವ್ಯವಹಾರಗಳ ಕುರಿತ ಗುಪ್ತಚರ ಇಲಾಖೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಆಫ್ರಿಕಾ ಮತ್ತು ದುಬೈನಲ್ಲಿ ಕರಾಳ ವಜ್ರ ಸಾಗಣೆ ಮತ್ತು ಮಾರಾಟ ಈಗ ಆತನ ಪ್ರಮುಖ ವ್ಯವಹಾರವಾಗಿದೆ. ಕೀನ್ಯಾ, ಜಿಂಬಾಬ್ವೆ, ಅಂಗೋಲಾ ಮುಂತಾದ ಆಫ್ರಿಕಾದ ಆಂತರಿಕ ಗಲಭೆಗೆ ಸ್ಥಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮಾಡಿ, ಕಚ್ಛಾ ವಜ್ರಗಳನ್ನು ಜಗತ್ತಿನ ವಿವಿಧೆಡೆಗೆ ಕಳ್ಳಸಾಗಣೆ ಮಾಡಲಾಗುತ್ತಿದ್ದು, ಇಂತಹ ಸಂಘರ್ಷದ ವಲಯದ ವಜ್ರಗಳಿಗೆ ಬ್ಲಡ್ ಡೈಮಂಡ್ ಅಥವಾ ಕಾನ್ ಫ್ಲಿಟ್ ಡೈಮಂಡ್ ಎನ್ನಲಾಗುತ್ತಿದೆ.
ಆದರೆ, ಜಾಗತಿಕ ವಜ್ರ ಮಾರುಕಟ್ಟೆಯಲ್ಲಿ ನಿಷೇಧಿತ ಈ ವಜ್ರಗಳನ್ನು ಭೂಗತ ಮಾಫಿಯಾ ತನ್ನ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಮುಖ್ಯ ಮೂಲವಾಗಿಸಿಕೊಂಡಿದೆ. ಗುಪ್ತಚರ ಇಲಾಖೆ ಮಾಹಿತಿಯಲ್ಲಿ ದಾವೂದ್‍ನ ಡಿ ಕಂಪನಿ ಆಫ್ರಿಕಾ ದೇಶಗಳಲ್ಲಿ ಹೊಂದಿರುವ ಸಂಪರ್ಕ, ವಜ್ರ ಸಾಗಣೆಯ ವಿವರಗಳನ್ನು ದಾಖಲಿಸಿದ್ದು, ಈ ಕರಾಳ ದಂಧೆಗೆ ಪೂರಕವಾಗಿ ಆತ ದುಬೈನಲ್ಲಿ ತನ್ನದೇ ಅಲ್ ನೂರ್ ಡೈಮಂಡ್ಸ್ ಎಂಬ ಡೈಮಂಡ್ ವಹಿವಾಟು ಕಂಪನಿ ತೆರೆದಿದ್ದು, ಅದು ಆತನ ಎಲ್ಲಾ ವಜ್ರ ವಹಿವಾಟಿನ ಬಹಿರಂಗ ಮುಖಎನ್ನಲಾಗಿದೆ.
ಪ್ರತಿ ಸಾಗಣೆಯಲ್ಲಿ 5-10 ಲಕ್ಷ ಡಾಲರ್ ಮೌಲ್ಯದ ವಜ್ರ ದುಬೈಗೆ ತಲುಪುತ್ತಿದ್ದು, ಕಳ್ಳ ಸಾಗಣೆ ಮಾಡುವ ಆಫ್ರಿಕಾ ಮೂಲದ ವ್ಯಕ್ತಿಗೆ ಪ್ರತಿ ಬಾರಿ 10 ಸಾವಿರ ಡಾಲರ್ ಸಾಗಣೆ ವೆಚ್ಚವಾಗಿ ನೀಡಲಾಗುತ್ತಿದೆ. ಆದರೆ,ಈ ವಹಿವಾಟಿಗೆ ಇರಬಹುದಾದ ಭಾರತದ ಸಂಪರ್ಕಗಳನ್ನು ಪತ್ತೆ ಮಾಡುವತ್ತ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಭಾರತ ಜಾಗತಿಕ ವಜ್ರ ಸಂಸ್ಕರಣೆಯಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನ ತನಿಖೆ ಮಹತ್ವದ್ದು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


