ದೇಶ

ಕೋಟಾ ವಿವಾದ: ಲಾಕಪ್‍ಡೆತ್ ಕೇಸಲ್ಲಿ 9 ಪೊಲೀಸರ ವಿರುದ್ಧ ಎಫ್ಐಆರ್

ಪಟೇಲ್ ಕೋಟಾ ಹಿಂಸಾಚಾರದ ವೇಳೆ ನಡೆದ ಲಾಕಪ್‍ಡೆತ್‍ಗೆ ಸಂಬಂಧಿಸಿ ಇಬ್ಬರು ಇನ್‍ಸ್ಪೆಕ್ಟರ್‍ಗಳು, ಒಬ್ಬ ಸಬ್‍ಇನ್ಸ್‍ಪೆಕ್ಟರ್ ಸೇರಿದಂತೆ 9 ಮಂದಿ ಪೊಲೀಸರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ...

ಕೋಟಾ ವಿವಾದ: ಲಾಕಪ್‍ಡೆತ್ ಕೇಸಲ್ಲಿ 9 ಪೊಲೀಸರ ವಿರುದ್ಧ ಎಫ್ಐಆರ್
ಸಹಜ ಸ್ಥಿತಿಯತ್ತ ಗುಜರಾತ್ (ಸಂಗ್ರಹ ಚಿತ್ರ)
Published On :

ಅಹಮದಾಬಾದ್: ಪಟೇಲ್ ಕೋಟಾ ಹಿಂಸಾಚಾರದ ವೇಳೆ ನಡೆದ ಲಾಕಪ್‍ಡೆತ್‍ಗೆ ಸಂಬಂಧಿಸಿ ಇಬ್ಬರು ಇನ್‍ಸ್ಪೆಕ್ಟರ್‍ಗಳು, ಒಬ್ಬ ಸಬ್‍ಇನ್ಸ್‍ಪೆಕ್ಟರ್ ಸೇರಿದಂತೆ 9 ಮಂದಿ ಪೊಲೀಸರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.

ಪೊಲೀಸ್ ವಶದಲ್ಲಿರುವಾಗ ಮೃತಪಟ್ಟ ಸ್ವೆತಾಂಗ್ ಪಟೇಲ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಗುಜರಾತ್ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ, ಲಾಕಪ್‍ಡೆತ್‍ನಲ್ಲಿ ಎಸಿಪಿ ಸೇರಿದಂತೆ ಹಲವು ಅಧಿಕಾರಿಗಳ ಕೈವಾಡವಿತ್ತು. ಆದರೆ ಅವರ ಹೆಸರುಗಳು ಎಫ್ಐಆರ್‍ನಲ್ಲಿ ಇಲ ಎಂದು ಸ್ವೆತಾಂಗ್ ಕುಟುಂಬದ ಪರ ವಕೀಲರು ಆರೋಪಿಸಿದ್ದಾರೆ. ಇದೇ ವೇಳೆ, ಸ್ವೆತಾಂಗ್ ಪಟೇಲ್ ನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದಾಗಿ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದು, `ಏನಾದರೂ ಸಮಸ್ಯೆಯಾದರೆ ಅದಕ್ಕೆ  ಸರ್ಕಾರವೇ ಹೊಣೆ' ಎಂದು ಎಚ್ಚರಿಸಿದ್ದಾರೆ.

ಕರ್ಫ್ಯೂ ವಾಪಸ್
ಹಿಂಸಾಚಾರ ಕಂಡ ಗುಜರಾತ್ ಶನಿವಾರ ಶಾಂತಿಯುತವಾಗಿದ್ದು, ಸಹಜ ಸ್ಥಿತಿಗೆ ಮರಳಿದೆ. ಹಿಂಸಾಚಾರದ ಘಟನೆ ಸಂಭವಿಸದ ಹಿನ್ನಲೆಯಲ್ಲಿ ಎಲ್ಲ ಪ್ರದೇಶಗಳಿಂದ ಕರ್ಫ್ಯೂ  ಹಿಂಪಡೆಯಲಾಗಿದೆ. ಆದರೆ, ಗಲಭೆ ವೇಳೆ ನಿಯೋಜಿಸಲಾಗಿದ್ದ ಅರೆ ಸೇನಾ ಪಡೆಗಳನ್ನು ವಾಪಸ್ ಕರೆಸಿಲ್ಲ ಎಂದು ಅಹಮದಾಬಾದ್ ಡಿಸಿ ರಾಜ್ ಕುಮಾರ್ ಬೇನಿವಾಲ್ ತಿಳಿಸಿದ್ದಾರೆ.

ಹೆದರಿ ಮನೆಗೆ ಹೋಗದ ಪಟೇಲರು!
ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿ ಹಿಂಸೆ ನಿಲ್ಲಿಸುವಂತೆ ಮತದಾರರಿಗೆ ತಿಳಿಹೇಳಿ ಎಂದು ಸಿಎಂ ಆನಂದಿಬೆನ್ ಪಟೇಲ್ ಸೂಚಿಸಿದ್ದರೂ, ಬಿಜೆಪಿಯ ಪಟೇಲ್ ಸಮುದಾಯದ ಹಲವು ಶಾಸಕರು, ಸಚಿವರು ಮನೆಗಳಿಗೇ ಹೋಗಿಲ್ಲ. ಇದಕ್ಕೆ ಕಾರಣ ಭಯ. ಎಲ್ಲಿ ಪಟೇಲ್ ಸಮುದಾಯದ ಪ್ರತಿಭಟನಾಕಾರರು ತಮ್ಮ ಮೇಲೆ ಹಲ್ಲೆ ನಡೆಸುತ್ತಾರೋ ಎಂಬ ಭೀತಿಯಿಂದ ಅನೇಕ  ಜನಪ್ರತಿನಿಧಿ ಗಳು ಮನೆ ಕಡೆ ಹೆಜ್ಜೆಹಾಕಿಲ್ಲ. ಎಲ್ಲರೂ ರಾಜಧಾನಿ ಗಾಂಧಿನಗರದಲ್ಲಿರುವ ನಿವಾಸಗಳಿಗೇ ತಮ್ಮ ಕುಟುಂಬ ಸದಸ್ಯರನ್ನು ಕರೆಸಿ ಕೊಂಡು ರಾಖಿ ಹಬ್ಬ ಆಚರಿಸಿ ಕೊಂಡಿದ್ದಾರೆ.

ನಮ್ಮದೇ ಸರ್ಕಾರವಿದ್ದರೂ ಇದೇ ಮೊದಲ ಬಾರಿಗೆ ನನಗೆ ಇಷ್ಟೊಂದು ಭಯ ಆಗಿದೆ. ಸಚಿವರೇ ಸೇಫ್ ಅಲ್ಲದಿರುವಾಗ ನಾವು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ಅದಕ್ಕಾಗಿ ಮನೆ ಹೋಗದೇ ಇಲ್ಲೇ ರಾಖಿ ಹಬ್ಬ ಆಚರಿಸಿದೆವು.
-ಸೌರಾಷ್ಟ್ರದ ಶಾಸಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.