ದೇಶ

ಈರುಳ್ಳಿ ಪೇಸ್ಟ್ ಬರುತ್ತಂತೆ!

ಈರುಳ್ಳಿ ದರ ಹೆಚ್ಚುತ್ತಿದೆಯೇ? ಚಿಂತೆ ಮಾಡ್ಬೇಡಿ, ಕೇಂದ್ರ ಸರ್ಕಾರ ಈರುಳ್ಳಿಯನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಕೊಡೋದಿಕ್ಕೆ ಚಿಂತನೆ ನಡೆಸ್ತಿದೆ!

ಈರುಳ್ಳಿ ಪೇಸ್ಟ್ ಬರುತ್ತಂತೆ!
ಕೇಂದ್ರ ಸಚಿವೆ ಹರ್ಸೀಮ್ರತ್ ಸಿಂಗ್ ಬಾದಲ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಈರುಳ್ಳಿ ದರ ಹೆಚ್ಚುತ್ತಿದೆಯೇ? ಚಿಂತೆ ಮಾಡ್ಬೇಡಿ, ಕೇಂದ್ರ ಸರ್ಕಾರ ಈರುಳ್ಳಿಯನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಕೊಡೋದಿಕ್ಕೆ ಚಿಂತನೆ ನಡೆಸ್ತಿದೆ!

ಹೇಗೆ, ಎತ್ತ ಎಂಬ ಚಿಂತೆ ಬೇಡ, ಹೀಗಂತ ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‍ಸಿಮ್ರತ್ ಸಿಂಗ್ ಬಾದಲ್ ಹೇಳಿದ್ದಾರೆ. ಅವರಿಗೆ ಇಂಥದ್ದೊಂದು ಸೂಪರ್ ಐಡಿಯಾ ಹೊಳೆದಿದೆ. ಇವರ ಪ್ರಕಾರ, ಈರುಳ್ಳಿಗೆ ಕಡಿಮೆ ಬೆಲೆ ಇರುವಾಗ ಅದನ್ನು ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ ಮಾಡಿಟ್ಟುಕೊಳ್ಳಬೇಕು, ಬೆಲೆ ಹೆಚ್ಚಾದಾಗ ಇದನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.   ಮಳೆಗಾಲದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಪರ್ಯಾಯ ಚಿಂತನೆ ಮಾಡಿ, ಅದನ್ನು ಪೇಸ್ಟ್ ಮತ್ತು ಪೌಡರ್ ಮಾಡಿಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.

ಇಂಥ ಕೆಲಸಗಳಿಗಾಗಿ ತಮ್ಮ ಸಚಿವಾಲಯ ಪುಟ್ಟ ಆಹಾರ ಪಾರ್ಕ್ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಲ್ಲಿ ಈರುಳ್ಳಿ ಉತ್ಪಾದಿಸಬಹುದು. ಒಂದು ಕಂಪನಿಗೆ 50 ಎಕರೆಗಿಂತಲೂ ಕಡಿಮೆ ಭೂಮಿ  ಸಾಕು. ಜತೆಗೆ ಸರ್ಕಾರ ರು.1 ಕೋಟಿ ಸಬ್ಸಿಡಿಯನ್ನೂ ನೀಡುತ್ತದೆ ಎಂದಿದ್ದಾರೆ.

700 ಕೆಜಿ ಈರುಳ್ಳಿ ಕದ್ದರು

ಕಳ್ಳರು ಮುಂಬೈನ ಹೊರವಲಯದ ದಾಸ್ತಾನು ಅಂಗಡಿಯೊಂದರಿಂದ ಸುಮಾರು 700 ಕೆಜಿ ಈರುಳ್ಳಿ ಕದ್ದಿದ್ದಾರೆ. ಇದು ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಗ್ಗೆ ನಡೆದಿದೆ ಎಂದು ಹೇಳಲಾಗಿದೆ. ಈ ಈರುಳ್ಳಿ ಬೆಲೆ ಸುಮಾರು ರು.50 ಸಾವಿರ ಇರಬೇಕು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.