ದೇಶ

ಮೈಸೂರಿನ್ನು ಸೋಲಾರ್ ಸಿಟಿ

ಮೈಸೂರು ಸೇರಿದಂತೆ ದೇಶದ 50 ನಗರಗಳನ್ನು ಸೋಲಾರ್ ನಗರಗಳಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಲಿದೆ...

ಮೈಸೂರಿನ್ನು ಸೋಲಾರ್ ಸಿಟಿ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮೈಸೂರು ಸೇರಿದಂತೆ ದೇಶದ 50 ನಗರಗಳನ್ನು ಸೋಲಾರ್ ನಗರಗಳಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಲಿದೆ. ಈ ಸಂಬಂಧ ನವ ಮತ್ತು ನವೀಕರಣ ಇಂಧನ ಸಚಿವಾಲಯ ಪಟ್ಟಿ ತಯಾರಿಸಿದೆ.

ಒಟ್ಟಾರೆ 60 ನಗರಗಳ ಪ್ರಸ್ತಾಪ ಈ ಸಚಿವಾಲಯದ ಮುಂದೆ ಹೋಗಿತ್ತು. ಇದರಲ್ಲಿ 50 ನಗರಗಳ ಹೆಸರನ್ನು ಅಂತಿಮಗೊಳಿಸಿದೆ. ಈ ಪಟ್ಟಿಯಲ್ಲಿ ರಾಜ್ಯದಿಂದ ಕೇವಲ ಮೈಸೂರು ಮಾತ್ರ ಆಯ್ಕೆಯಾಗಿದೆ.

ಉಳಿದಂತೆ ದೆಹಲಿ, ಆಗ್ರಾ, ಗಾಂಧಿನಗರ,ರಾಜ್‍ಕೋಟ್, ಸೂರತ್, ಶಿರಡಿ, ನಾಗ್ಪುರ, ಔರಂಗಾಬಾದ್, ಇಂಫಾಲ್, ಚಂಡೀಗಡ, ಗುರ್ಗಾವ್, ಪಣಜಿ ಸೇರಿದಂತೆ ಒಟ್ಟು 50 ನಗರಗಳಿವೆ. ಈ ನಗರಗಳಲ್ಲಿ ಒಟ್ಟು 8 ಅನ್ನು ಮಾದರಿ ಸೋಲಾರ್ ಸಿಟಿಗಳಾಗಿ ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡಲಿದೆ. ಅಂದರೆ ನಾಗ್ಪುರ,ಚಂಡೀಗಡ, ಗಾಂಧಿನಗರ ಮತ್ತುಮೈಸೂರು ನಗರಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.