ದೇಶ

ಪೊಲೀಸರ ಕಿತ್ತಾಟ: 17 ರೈಲುಗಳ ಅಡಿಗೆ ಸಿಲುಕಿ ಛಿದ್ರವಿಚ್ಛಿದ್ರವಾಯ್ತು ಯುವಕನ ಮೃತದೇಹ

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದನು. ಆದರೆ, ಘಟನಾ ಸ್ಥಳ ತಮ್ಮ ಅಧಿಕಾರ ವ್ಯಾಪ್ತಿಗೆ ಸೇರಿದ್ದಲ್ಲ ಎಂಬ...

ಪೊಲೀಸರ ಕಿತ್ತಾಟ: 17 ರೈಲುಗಳ ಅಡಿಗೆ ಸಿಲುಕಿ ಛಿದ್ರವಿಚ್ಛಿದ್ರವಾಯ್ತು ಯುವಕನ ಮೃತದೇಹ
ಸಾಂದರ್ಭಿಕ ಚಿತ್ರ
Published On :

ಬರೇಲಿ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದನು. ಆದರೆ, ಘಟನಾ ಸ್ಥಳ ತಮ್ಮ ಅಧಿಕಾರ ವ್ಯಾಪ್ತಿಗೆ ಸೇರಿದ್ದಲ್ಲ ಎಂಬ ಪೊಲೀಸರ ಕಿತ್ತಾಟದಿಂದಾಗಿ ಮೃತಪಟ್ಟ ಯುವಕನ ದೇಹದ ಮೇಲೆ ಮತ್ತೆ 17 ರೈಲುಗಳು ಹಾದು ಹೋಗಿರುವ ಘಟನೆ ಕಿಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದನು. ಆದರೆ, ಈ ಮೃತದೇಹವನ್ನು ಹೊರತೆಗೆಯಲು ಎರಡು ಪೊಲೀಸ್ ತಂಡದ ನಡುವೆ ಕಿತ್ತಾಟವಾಗಿದೆ. ಈ ಕಿತ್ತಾಟದ ಮಧ್ಯೆ ಮೃತ ಯುವಕನ ದೇಹದ ಮೇಲೆ ಇನ್ನೂ 16 ರೈಲುಗಳು ಹಾದು ಹೋಗಿದ್ದು, ಮೃತ ದೇಹದ ಗುರುತು ಸಿಗದಂತಾಗಿದೆ.

ಗುರುವಾರ ಬೆಳಗ್ಗೆ 6:18ರ ಸುಮಾರಿಗೆ ಸ್ಮಶಾನ ಭೂಮಿ ಕ್ರಾಸಿಂಗ್ ಬಳಿ ಹೌರಾದಿಂದ ಅಮೃತಸರಕ್ಕೆ ಚಲಿಸುತ್ತಿದ್ದ ಅಕಾಲ್ ತಖ್ತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಸುಮಾರು 20-22ರ ಹರೆಯದ ಅಪರಿಚಿತ ಯುವಕ ಮೃತಪಟ್ಟಿದ್ದ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಕಿಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರೆ ಅತ್ತ ರೈಲಿನ ಚಾಲಕ ಬರೇಲಿ ರೈಲ್ವೆ ನಿಲ್ದಾಣದಲ್ಲಿಯ ನಿಯಂತ್ರಣ ಕೊಠಡಿಗೆ ಸುದ್ದಿ ಮುಟ್ಟಿಸಿದ್ದ. ಜಿಆರ್‌ಪಿ ಸಿಬ್ಬಂದಿ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸುವಂತೆ ಕಿಲಾ ಪೊಲೀಸರಿಗೆ ಸೂಚಿಸಿದ್ದರು.

ಘಟನಾ ಸ್ಥಳದ ವ್ಯಾಪ್ತಿಯ ಕುರಿತು ಸರಕಾರಿ ರೈಲ್ವೆ ಪೊಲೀಸರು(ಜಿಪಿಎಫ್) ಮತ್ತು ಕಿಲಾ ಪೊಲೀಸರ ಕಿತ್ತಾಟದಲ್ಲಿ 6 ಗಂಟೆಗಳ ಕಾಲ ಹಳಿಗಳಲ್ಲಿಯೇ ಬಿದ್ದುಕೊಂಡಿದ್ದ ಆ ನತದೃಷ್ಟನ ದೇಹದ ಮೇಲೆ ಇನ್ನೂ 16 ರೈಲುಗಳು ಹಾದು ಹೋಗಿದ್ದು, ಅದು ಗುರುತು ಹಿಡಿಯಲೂ ಸಾಧ್ಯವಾಗದಷ್ಟು ಛಿದ್ರವಿಚ್ಛಿದ್ರಗೊಂಡಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಹಿರಿಯ ರೈಲ್ವೆ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಕಿಲಾ ಪೊಲೀಸರು ಶವವನ್ನು ತಮ್ಮ ವಶಕ್ಕೆ ತಗೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆದರೆ ಆ ಯುವಕನ ದೇಹ ಗುರುತು ಸಿಗದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.