ರೈಲ್ವೇ ಸೇವೆ ಅಧಿಕಾರಿ ಲೊಹಾನಿ ಏರ್ ಇಂಡಿಯಾಗೆ ಸಿಎಂಡಿ
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ 1980ನೇ...

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ 1980ನೇ ಬ್ಯಾಚ್ ನ ಭಾರತೀಯ ರೈಲ್ವೆ ಸೇವೆಯ ಹಿರಿಯ ಅಧಿಕಾರಿ ಅಶ್ವನಿ ಲೊಹಾನಿ ಅವರನ್ನು
ನೇಮಿಸಲಾಗಿದೆ. ಸದ್ಯ ಅವರು ಮಧ್ಯಪ್ರದೇಶ ಪ್ರವಾಸೋದ್ಯಮಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹಾಲಿ ಮುಖ್ಯಸ್ಥ ರೋಹಿತ್ ಸಂದನ್ರ ವಿಸ್ತರಿತ ಒಂದು ವರ್ಷದ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದೆ. ಕೇಂದ್ರ ಸಂಪುಟದ ನೇಮಕ ಸಮಿತಿ (ಎಸಿಸಿ) ಈ ಬಗ್ಗೆ ಸಮ್ಮತಿ ಸೂಚಿಸಿದೆ. ಅವರ ಅಧಿಕಾರದ ಅವಧಿ ಮೂರು ವರ್ಷ. ಅಂದಹಾಗೆ ಏರ್ ಇಂಡಿಯಾ ರು.30 ಸಾವಿರ ಕೋಟಿಯಷ್ಟು ನಷ್ಟದಲ್ಲಿದೆ.ಅಶ್ವನಿ ಲಹೋನಿ ಮೂಲತಃ ಮೆಕಾನಿಕಲ್ ಎಂಜಿನಯರ್. ಇಂಡಿಯನ್ ಸ್ಟೀಮ್ ರೈಲ್ವೆ ಸೊಸೈಟಿ ಸ್ಥಾಪಕ ಸದಸ್ಯರು. ಚಾರ್ಟರ್ಡ್ ಇನ್ ಸ್ಟಿಟ್ಯೂಟ್ ಆಫ್ ಲಾಜಿಸ್ಟಿಕ್ ಆ್ಯಂಡ್ ಟ್ರಾನ್ಸ್ ಪೋರ್ಟ್ನ ಫಲೋಆಗಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ಪ್ರವಾಸೋದ್ಯಮ ಮಂಡಳಿಯ ಮಂಡಳಿಯ ಸದಸ್ಯರಾಗಿದ್ದಾರೆ ಲೊಹಾನಿ. ಹವ್ಯಾಸಿ ಲೇಖಕರಾಗಿರುವ ಅವರು ವಿನ್ನಿಂಗ್ ಅಟ್ ವರ್ಕ್ ಎಗೆನೆಸ್ಟ್ ಆಲ್ ಆಡ್ಸ್'',`` ಸ್ಮೋಕಿಂಗ್ ಬ್ಯೂಟೀಸ್'' ಎಂಬ ಕೃತಿಗಳನ್ನು ರಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


