ದೇಶ

ಅತ್ತಿಗೆ ಜೊತೆ ಯಾವಾಗ ಬರ್ತೀರಿ? ರಾಹುಲ್ ಗಾಂಧಿಗೆ ಅಮೇಥಿ ಜನರ ಪ್ರಶ್ನೆ?

ಅಣ್ಣಾ ! ಎಲ್ಲಿಯವರೆಗೂ ನೀವು ಒಬ್ಬಂಟಿಯಾಗಿ ಅಮೇಥಿ ಬರುತ್ತೀರಾ? ಅತ್ತಿಗೆಯನ್ನು ನಿಮ್ಮ ಜೊತೆ ಯಾವಾಗ ಕರೆ ತರುತ್ತೀರಾ ಎಂದು ಗ್ರಾಮಸ್ಥರು...

ಅತ್ತಿಗೆ ಜೊತೆ ಯಾವಾಗ ಬರ್ತೀರಿ? ರಾಹುಲ್ ಗಾಂಧಿಗೆ ಅಮೇಥಿ ಜನರ ಪ್ರಶ್ನೆ?
ರಾಹುಲ್ ಗಾಂಧಿ
Published On :

ಅಮೇಥಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಂದಿನಂತೆ ತಮ್ಮ ಸ್ವಕ್ಷೇತ್ರ ಅಮೇಥಿಗೆ ಭೇಟಿ ನೀಡುತ್ತಾರೆ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸುತ್ತಾರೆ. ಆದರೆ ಈ ವಾರ ರಾಹುಲ್ ಗಾಂಧಿ ಅಮೇಥಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಜುಗರದ ಸನ್ನಿವೇಶ ಎದುರಾಯಿತು.

ಅಣ್ಣಾ ! ಎಲ್ಲಿಯವರೆಗೂ ನೀವು ಒಬ್ಬಂಟಿಯಾಗಿ ಅಮೇಥಿ ಬರುತ್ತೀರಾ? ಅತ್ತಿಗೆಯನ್ನು ನಿಮ್ಮ ಜೊತೆ ಯಾವಾಗ ಕರೆ ತರುತ್ತೀರಾ ಎಂದು ಗ್ರಾಮಸ್ಥರು ಕಾಂಗ್ರೆಸ್ ಯುವರಾಜನಿಗೆ ಪ್ರಶ್ನಿಸಿದರು. ಆದರೆ ಇದಕ್ಕೆ ಯಾವುದೇ ಉತ್ತರ ನೀಡದ ರಾಹುಲ್ ಗಾಂಧಿ ಸುಮ್ಮನೆ ನಕ್ಕು ಅಲ್ಲಿಂದ ತೆರಳಿದರು.

45 ವರ್ಷದ ರಾಹುಲ್ ಗಾಂಧಿಗೆ ಗ್ರಾಮಸ್ಥರು ಕೇಳಿದ ಪ್ರಶ್ನೆಯಿಂದ ಕೆಲಕಾಲ ಮುಜುಗರಕ್ಕೀಡಾದರು. ಜನರ ಪ್ರಶ್ನೆಗೆ ಉತ್ತರಿಸಲು ರಾಹುಲ್ ಗಾಂಧಿಗೆ ಇನ್ನೂ ಕೆಲ ಸಮಯ ಬೇಕಾಗಬಹುದು ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.