ಆಸ್ಟ್ರೇಲಿಯಾ-ಭಾರತ ಶಿಕ್ಷಣ ರಾಯಭಾರಿಯಾಗಿ ಆಡಂ ಗಿಲ್ ಕ್ರಿಸ್ಟ್ ಆಯ್ಕೆ
ಭಾರತ-ಆಸ್ಟೇಲಿಯಾದ ಮಹತ್ವದ ಒಪ್ಪಂದಗಳಲ್ಲಿ ಒಂದಾದ ಶಿಕ್ಷಣ ಒಪ್ಪಂದಕ್ಕೆ ಬದ್ಧವಾಗಿರುವ ಆಸ್ಟ್ರೇಲಿಯಾ ದೇಶವು ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ-ಭಾರತದ ಶಿಕ್ಷಣದ ರಾಯಭಾರಿಯಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಹಾಗೂ ವಿಕೆಟ್ ಕೀಪರ್...

ಮೆಲ್ಬರ್ನ್: ಭಾರತ-ಆಸ್ಟೇಲಿಯಾದ ಮಹತ್ವದ ಒಪ್ಪಂದಗಳಲ್ಲಿ ಒಂದಾದ ಶಿಕ್ಷಣ ಒಪ್ಪಂದಕ್ಕೆ ಬದ್ಧವಾಗಿರುವ ಆಸ್ಟ್ರೇಲಿಯಾ ದೇಶವು ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ-ಭಾರತದ ಶಿಕ್ಷಣದ ರಾಯಭಾರಿಯಾಗಿ ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಹಾಗೂ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ ಅವರನ್ನು ಗುರುವಾರ ಆಯ್ಕೆ ಮಾಡಿದೆ.
ಆಗಸ್ಟ್ 24 ರಂದು 3ನೇ ಬಾರಿಗೆ ನವದೆಹಲಿ ನಡೆಯುವ ಆಸ್ಟ್ರೇಲಿಯಾ-ಭಾರತ ಶಿಕ್ಷಣ ಮಂಡಳಿ ಸಭೆ ಹಿನ್ನೆಲೆಯಲ್ಲಿ ಆಸ್ಟೇಲಿಯಾದ ಸರ್ಕಾರ ಇದೀಗ ಆಸ್ಟ್ರೇಲಿಯಾ-ಭಾರತದ ಶಿಕ್ಷಣ ರಾಯಭಾರಿಯಾಗಿ ಗಿಲ್ ಕ್ರಿಸ್ಟ್ ಅವರನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಅಧಿಕೃತವಾಗಿ ಘೋಷಣೆ ಮಾಡಿರುವ ಆಸ್ಟೇಲಿಯಾ ಶಿಕ್ಷ ಸಚಿವ ಕ್ರಿಸ್ಟೋಫರ್ ಪೈನೆ ಪ್ರಿಯೋರ್ ಅವರು, ಆಡಂ ಗಿಲ್ ಕ್ರಿಸ್ಟ್ ಅವರನ್ನು ಆಸ್ಟ್ರೇಲಿಯಾ ಭಾರತೀಯ ಶಿಕ್ಷಣ ರಾಯಭಾರಿಯಾಗಿ ಘೋಷಣೆ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಭಾರತದ ಶಿಕ್ಷಣ ಬಾಂಧವ್ಯ ಕುರಿತಂತೆ ಗಿಲ್ ಕ್ರಿಸ್ಟ್ ಅವರನ್ನು ಉತ್ತಮ ಪಾತ್ರ ನಿರ್ವಹಿಸುತ್ತಾರೆಂಬುದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಆಡಂ ಗಿಲ್ ಕ್ರಿಸ್ಟ್ ಅವರನ್ನು ಭಾರತೀಯರು ಒಬ್ಬ ಕ್ರಿಕೆಟರ್ ಆಗಿ ಮಾತ್ರ ನೋಡಿದ್ದರು. ಇನ್ನು ಮುಂದಿನ ದಿನಗಳಲ್ಲಿ ಶಿಕ್ಷಣದ ಕುರಿತಂತೆ ಗಿಲ್ ಕ್ರಿಸ್ಟ್ ಅವರಿಗಿರುವ ಶ್ರೇಷ್ಟತೆ ಹಾಗೂ ಸಮಗ್ರತೆಯ ಬಗ್ಗೆಯೂ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.
ಭಾರತ-ಆಸ್ಟ್ರೇಲಿಯಾದ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಈಗಾಗಲೇ ಸಂತಸ ವ್ಯಕ್ತಪಡಿಸಿರುವ ಆಡಂ ಗಿಲ್ ಕ್ರಿಸ್ಟ್ ಅವರು, ಇದೊಂದು ದೊಡ್ಡ ಸವಾಲಿನ ಕೆಲಸ. ಆದರೂ, ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಹೊಸ ಪಾತ್ರ ನಿರ್ವಹಿಸಲು ಉತ್ಸುಕನಾಗಿದ್ದೇನೆ. ಎರಡು ದೇಶಗಳ ಮಧ್ಯೆ ಶಿಕ್ಷಣದ ಪಾತ್ರ ಅತ್ಯಂತ ಮಹತ್ವವಾದದ್ದು, ಇಂತಹ ದೊಡ್ಡ ಜವಾಬ್ದಾರಿ ಇದೀಗ ನನ್ನ ಮೇಲಿದೆ. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇನೆಂಬುದರ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


