ಇಸೀಸ್ ಉಗ್ರರಿಂದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಸಮರ್ಥನೆಗೆ ಕುರಾನ್ ಉಲ್ಲೇಖ
ಇಸ್ಲಾಮಿಕ್ ಸ್ಟೇಟ್ ಉಗ್ರರು, 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದೂ ಅಲ್ಲದೇ ಕುರಾನ್ ನಲ್ಲಿ ಅತ್ಯಾಚಾರವೆಸಗುವುದಕ್ಕೆ ಅನುಮತಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನವದೆಹಲಿ: ಕ್ರೌರ್ಯದ ಪರಾಕಾಷ್ಟೆ ತಲುಪಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು, 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕುರಾನ್ ನಲ್ಲಿ ಅತ್ಯಾಚಾರವೆಸಗುವುದಕ್ಕೆ ಅನುಮತಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕುರಾನ್ ನನ್ನು ನಂಬದವರ ಮೇಲೆ ಅತ್ಯಾಚಾರ ನಡೆಸುವುದನ್ನು ಕುರಾನ್ ಉತ್ತೇಜಿಸುತ್ತದೆ. 12 ವರ್ಷದ ಯಜಿದಿ ಹುಡುಗಿಯ ಕೈ ಕಟ್ಟಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ರೇಪ್ ಮಾಡದಂತೆ ಬೇಡಿಕೊಂಡೆ ಆದರೂ ನಿರ್ದಯವಾಗಿ ಗ್ಯಾಂಗ್ ರೇಪ್ ನಡೆಸಿದರು. ಅಷ್ಟೇ ಅಲ್ಲದೇ ಕುರಾನ್ ನ್ನು ನಂಬದವರ ಮೇಲೆ ಅತ್ಯಾಚಾರ ಮಾಡುವುದರಿಂದ ತಾವು ದೇವರಿಗೆ ಮತ್ತಷ್ಟು ಹತ್ತಿರವಾಗುತ್ತೇವೆ ಎಂದು ಉಗ್ರನೊಬ್ಬ ಹೇಳಿದ ಎಂದು ಸಂತ್ರಸ್ತ ಯಜಿದಿ ಯುವತಿ ತಿಳಿಸಿದ್ದಾಳೆ.
ಅತ್ಯಾಚಾರದಂಥ ಹೀನ ಕೃತ್ಯ ನಡೆಸಿದ ಬಳಿಕ ಧಾರ್ಮಿಕ ಶ್ರದ್ಧೆಯನ್ನು ಪ್ರದರ್ಶಿಸಲು ಉಗ್ರರು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಇರಾಕ್, ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಪ್ರಾರಂಭವಾದಾಗಿನಿಂದ ಯಜಿದಿ ಸಮುದಾಯದ ಯುವತಿಯರು ಅಲ್ಪಸಂಖ್ಯಾತರಾಗಿದ್ದು ಲೈಂಗಿಕ ಗುಲಾಮಗಿರಿಯಾ ಬಲಿಪಶುಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


