ಪಂಜಾಬ್ ನಲ್ಲಿ ತಲೆಕೆಳಗಾಗಿ ಹಾರಾಡಿದ ಧ್ವಜ: 2 ಪೊಲೀಸರ ಅಮಾನತು
69ನೇ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಾಚರಣೆಯಲ್ಲಿ ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿರುವ ಘಟನೆಯೊಂದು ಪಂಜಾಬ್ ನ ಅಮೃತಸರದಲ್ಲಿ ಶನಿವಾರ ನಡೆದಿದೆ...

ಅಮೃತಸರ: 69ನೇ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಾಚರಣೆಯಲ್ಲಿ ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿರುವ ಘಟನೆಯೊಂದು ಪಂಜಾಬ್ ನ ಅಮೃತಸರದಲ್ಲಿ ಶನಿವಾರ ನಡೆದಿದೆ.
ಸ್ವಾತಂತ್ರ್ಯದ ದಿನದ ಸಂಭ್ರಮಾಚರಣೆಗಾಗಿ ಅಮೃತಸರದದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಧ್ವಜಾರೋಹಣವನ್ನು ಸಚಿವ ಬಿಕ್ರಮ್ ಸಿಂಗ್ ಮಜಿಥಿಯ ಅವರು ಮಾಡಿದ್ದರು. ಆದರೆ, ಧ್ವಜ ತಲೆಕೆಳಗಾಗಿ ಹಾರಾಡುವುದನ್ನು ಗಮನಿಸದ ಸಚಿವ ಧ್ವಜಕ್ಕೆ ಸೆಲ್ಯೂಟ್ ಹೊಡೆದು ನೇರವಾಗಿ ಭಾಷಣ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಾಧ್ಯಮದ ಪತ್ರಕರ್ತನೊಬ್ಬ ಸಚಿವವನ್ನು ಈ ಬಗ್ಗೆ ಪ್ರಶ್ನೆ ಕೇಳಿದಾಗ ಧ್ವಜವನ್ನು ಗಮನಿಸಿದ್ದಾರೆ.
ಕೂಡಲೇ ಕೆಂಡಾಮಂಡಲವಾದ ಸಚಿವ ಘಟನೆಗೆ ಕಾರಣಕರ್ತರಾದ ನಿಲ್ಕಕ್ಷ್ಯ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಘಟನೆ ಕುರಿತಂತೆ ವಿವರಣೆ ನೀಡುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಾಥಮಿಕ ವಿಚಾರಣೆಯ ಪ್ರಕಾರ ಇದೀಗ ಇನ್ಸ್ ಪೆಕ್ಟರ್ ಗುರ್ಮುಖ್ ಸಿಂಗ್ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ಗುರಿಂದರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಪಂಜಾಬ್ ಪೊಲೀಸ್ ಆಯುಕ್ತ ಜತಿಂದರ್ ಔಲಾಖ್ ಹೇಳಿದ್ದಾರೆ.
ಪಂಜಾಬ್ ನಲ್ಲಿ ನಡೆದ ಈ ಘಟನೆ ವೇಳೆ ಮಜಿಥಿಯ ಅವರು ಉಲ್ಟಾ ಹಾರಿದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದಿರುವುದು ಇದೀಗ ಸಾಮಾಜಿಕ ತಾಣದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಬಿಕ್ರಮ್ ಸಿಂಗ್ ವಿರುದ್ಧ ಹಲವು ಚರ್ಚೆಗಳು ಆರಂಭವಾಗಿದ್ದು, ವ್ಯಂಗ್ಯಗಳು ವ್ಯಕ್ತವಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


