ಜಿಎಸ್‍ಟಿ: ಸರ್ಕಾರಕ್ಕೆ ಸವಾಲು
ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವಿನ ಮೊಂಡುತನ ಮತ್ತು ವಾಗ್ವಾದಕ್ಕೆ ಮಳೆಗಾಲದ ಅಧಿವೇಶನ ಬಲಿಯಾದ ಹಿನ್ನೆಲೆಯಲ್ಲಿ ಜಿಎಸ್‍ಟಿ ಮಸೂದೆಗೆ...

ನವದೆಹಲಿ: ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ನಡುವಿನ ಮೊಂಡುತನ ಮತ್ತು ವಾಗ್ವಾದಕ್ಕೆ ಮಳೆಗಾಲದ ಅಧಿವೇಶನ ಬಲಿಯಾದ ಹಿನ್ನೆಲೆಯಲ್ಲಿ ಜಿಎಸ್‍ಟಿ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಪಡೆಯಲಾಗದೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ವಿಶೇಷ ಅಧಿವೇಶನ ಕರೆಯುವ ಚಿಂತನೆ ನಡೆಸಿದೆ. 2016ರ ಏಪ್ರಿಲ್ 1ರಿಂದಲೇ ಜಿಎಸ್‍ಟಿ ಕಾಯ್ದೆ ದೇಶಾದ್ಯಂತ ಜಾರಿಗೆ ಬರಬೇಕಿದ್ದು,ಈಗಾಗಲೇ ಲೋಕಸಭೆಯ ಅನುಮತಿ ಪಡೆದಿರುವ ತಿದ್ದುಪಡಿ ಮಸೂದೆಗೆ ಇದೇ ಅಧಿವೇಶನದಲ್ಲಿ ರಾಜ್ಯಸಭೆ ಅಂಗೀಕಾರ ನೀಡಬೇಕಿತ್ತು. ಆದರೆ, ನಿರಂತರ ಕೋಲಾಹಲಕ್ಕೆ ಇಡೀ ಅಧಿವೇಶನ ಬಲಿಯಾಗಿದೆ. ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ನಡೆದ ಸಂಸದೀಯ ವ್ಯವಹಾರಗಳಲ್ಲಿನ ಸಂಸದೀಯ ಸಮಿತಿ ಸಭೆಯಲ್ಲಿ ಅಧಿವೇಶನ ಮುಕ್ತಾಯ ಘೋಷಣೆ ಡದೇ ಇರಲು ನಿರ್ಧರಿಸಿದ್ದು, ಸದ್ಯಕ್ಕೆ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ದೂಡಲಾಗಿದೆ. ಅವಕಾಶವನ್ನು ಬಳಸಿಕೊಂಡು ಈ ಮಾಸಾಂತ್ಯದಲ್ಲಿ ವಿಶೇಷ ಅಧಿವೇಶನ ಕರೆದು ಜಿಎಸ್‍ಟಿ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಪಡೆಯುವ ಚಿಂತನೆ ಸರ್ಕಾರದ ಮುಂದಿದೆ ಎಂದು ಸುಳಿವು ನೀಡಿರುವ ಸಚಿವ ಜೇಟ್ಲಿ, ಮುಂದಿನ .1ರ ಹೊತ್ತಿಗೆ ಜಿಎಸ್‍ಟಿ ಜಾರಿಗೆ ತರಲುಸರ್ಕಾರ ಕಟಿಬದ್ಧವಾಗಿದೆ. ಆ ನಿಟ್ಟಿನಲ್ಲಿ ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


