ದೇಶ

ಹಳೆ ವಾಹನ ಒಪ್ಪಿಸಿ ಹಣ ಗಳಿಸಿ

ವಾಯು ಮಾಲಿನ್ಯ ತಡೆಯಲು ಮತ್ತು ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಹತ್ತು ವರ್ಷಗಳಿಗಿಂತ ಹಳೆಯ...

ಹಳೆ ವಾಹನ ಒಪ್ಪಿಸಿ ಹಣ ಗಳಿಸಿ
ನಿತಿನ್ ಗಡ್ಕರಿ
Published On :

ನವದೆಹಲಿ: ವಾಯು ಮಾಲಿನ್ಯ ತಡೆಯಲು ಮತ್ತು ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಹತ್ತು ವರ್ಷಗಳಿಗಿಂತ ಹಳೆಯ ವಾಹನಗಳನ್ನುಮಾರಾಟ ಮಾಡಿದರೆ ರು.1.5 ಲಕ್ಷವರೆಗೂ ಪ್ರೋತ್ಸಾಹ ಧನ ನೀಡುವ ಚಿಂತನೆ ನಡೆಸಿದೆ. ಗುರುವಾರ ಈ ವಿಷಯ ತಿಳಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು ಹಣಕಾಸು ಸಚಿವಾಲಯದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಹತ್ತು ವರ್ಷಗಳ ಹಳೆಯದಾದ ವಾಹನವ ನ್ನು ಮಾರಾಟ ಮಾಡಿದಾಗ ಕೇಂದ್ರಸರ್ಕಾರ ಪ್ರಮಾಣ ಪತ್ರ ನೀಡಲಿದೆ. ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ಇದನ್ನು ತೋರಿಸಿದರೆ ರು.1.5 ಲಕ್ಷವರೆಗೂ ರಿಯಾಯಿತಿ ಸಿಗಲಿದೆ.
ಸಣ್ಣ ಪ್ರಮಾಣದ ಸರಕು ಸಾಗಣೆ ವಾಹನ ಗಳಿಗೆ ರು 50 ಸಾವಿರವರೆಗೂ ಪ್ರೋತ್ಸಾಹ ಧನ ದೊರೆತರೆ ಕಾರುಗಳಿಗೆ ರು. 30 ಸಾವಿರದವರೆಗೂ ಸಿಗಲಿದೆ. ಟ್ರಕ್‍ಗಳಂತಹ ದೊಡ್ಡ ವಾಹನಗಳಿಗೆ ರು. 1.5ಲಕ್ಷ-ವರೆಗೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ 8ರಿಂದ 10 ಬಂದರುಗಳ ಬಳಿ ಕೈಗಾರಿಕಾ ಘಟಕಗಳನ್ನು ನಿರ್ಮಾಣ ಮಾಡಲಾಗುವುದು. ಇವು ವಾಹನ ಪಡೆದಿದ್ದಕ್ಕೆಪ್ರಮಾಣ ಪತ್ರ-ಗಳನ್ನು ವಿತರಿಸುವುದು ಮಾತ್ರವಲ್ಲದೆ ದೇಶದ ಮತ್ತು ವಿದೇಶಗಳ ವಾಹನಗಳನ್ನೂ ರೀಸೈಕಲ್ ಮಾಡಲಿವೆ. ಈ ಉದ್ಯೋಗ ಸೃಷ್ಟಿಸುವುದು ಮಾತ್ರವಲ್ಲದೆ ಆರ್ಥಿಕತೆಗೂ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಇದು ಅತ್ಯುತ್ತಮವಾದ ಕೈಗಾರಿಕೆಯಾಗಿದ್ದು ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ಹತ್ತು ವರ್ಷಗಳಿಗಿಂತ ಹಳೆಯ ವಾಹನಗಳು ಹಳೆಯ ತಂತ್ರಜ್ಞಾನದ ಮೇಲೆ ತಯಾರಿಸಿದ್ದು ಸುರಕ್ಷಾ ವ್ಯವಸ್ಥೆ ಹೊಂದಿಲ್ಲ. ಮತ್ತೊಂದು ಕಡೆ ಮಾಲಿನ್ಯವನ್ನು ಉಂಟುಮಾಡುತ್ತಿವೆ ಎಂದಿದ್ದಾರೆ.
ಪ್ರೋತ್ಸಾಹ ಧನ ನೀಡಲು ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸಿದ ನಂತರ ಜನ ತಮ್ಮ ಹಳೆಯ ವಾಹನಗಳನ್ನು ಒಪ್ಪಿಸಿ ಅಂತಾರಾಷ್ಟ್ರೀಯ ದರ್ಜೆಯ ಹೊಸ ವಾಹನಗಳನ್ನು ಪಡೆಯಬಹುದು ಎಂದು ಗಡ್ಕರಿ ತಿಳಿಸಿದ್ದಾರೆ.ಪರಿಸರ ಮಾಲಿನ್ಯ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಲಯ ಈಗಾಗಲೆ ತೀರ್ಪುನೀಡಿದೆ. ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿ ಸಿದಂತೆ ವಾಹನ ತಯಾರಕರು ಯುರೊ 5 ಅಥವಾ 6ನೇ ದರ್ಜೆಗೆ ಅನುಗುಣ
ವಾಗಿರೂಪಿಸಬೇಕಾಗಿದೆ. ಇದಕ್ಕೆ 4 ರಿಂದ 5 ವರ್ಷ ಕಾಲಾವಕಾಶ ಕೋರಿದ್ದಾರೆ ಎಂದು ಹೇಳಿದ್ದಾರೆ.ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು ಕಡಿಮೆ ದರದಲ್ಲಿ ಜೈವಿಕ ಇಂಧನ ಆಧರಿತವಾ ದ ವಾಹನಗಳನ್ನು ತಯಾರಿಸಿ ಕಳಿಸುವಂತೆವಿದೇಶಿ ವಾಹನ ತಯಾರಿಕಾ ಕಂಪನಿಗಳಿಗೂ ತಿಳಿಸಲಾಗಿದೆ. ವಿದೇಶಗಳಲ್ಲಿ ಒಂದು ದೇಶದಲ್ಲಿ 3 ರಿಂದ 4 ಸಾವಿರ ಬಸ್‍ಗಳಿರಬಹು ದು. ಆದರೆ ಭಾರತದಲ್ಲಿ 1.50 ಲಕ್ಷ ಬಸ್ಗಳಿವೆ. ಹೀಗಾಗಿ ಉತ್ತಮ ಗುಣಮಟ್ಟದ ವಾಹನಗಳನ್ನು ಕಡಿಮೆ ದರಕ್ಕೆ ಕಳಿಸಲು ಮನವಿ ಮಾಡಿರುವುದಾಗಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.