ದೇಶ

ಕ್ವೆಟ್ರೋಚಿ ಡೀಲ್ ನಲ್ಲಿ ಎಷ್ಟು ಪಡೆದಿದ್ದಾರೆಂದು ರಾಹುಲ್ ಸೋನಿಯಾರನ್ನು ಕೇಳಲಿ: ಸುಷ್ಮಾ

ಒಟ್ಟಾವಿಯೊ ಕ್ವಟ್ರೋಚಿಯಿಂದ ನಮಗೆಷ್ಟು ಹಣ ಸಂದಾಯವಾಗಿದೆ ಎಂದು ಸೋನಿಯಾ ಗಾಂಧಿಯಿಂದ ತಿಳಿದುಕೊಳ್ಳಿ ಎಂದು ರಾಹುಲ್ ಗಾಂಧಿಗೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಕ್ವೆಟ್ರೋಚಿ ಡೀಲ್ ನಲ್ಲಿ ಎಷ್ಟು ಪಡೆದಿದ್ದಾರೆಂದು ರಾಹುಲ್ ಸೋನಿಯಾರನ್ನು ಕೇಳಲಿ: ಸುಷ್ಮಾ
ಸುಷ್ಮಾ ಸ್ವರಾಜ್
Published On :

ನವದೆಹಲಿ: ಲಲಿತ್ ಮೋದಿ ಪ್ರಕರಣದಲ್ಲಿ ಸ್ಪಷ್ಟನೆ ನೀದಿದರೂ ರಾಜೀನಾಮೆಗೆ ಒತ್ತಾಯಿಸಿ ಸಂಸತ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ವಿದೇಶಾಂಗ ಇಲಾಖೆ ಸುಷ್ಮಾ ಸ್ವರಾಜ್ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಪ್ರತಿಭಟನಾ ನಿರತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರಾಹುಲ್ ಗಾಂಧಿ ಅವರ ಕುಟುಂಬದ ಇತಿಹಾಸವನ್ನು ಓದಿ ತಿಳಿಯಲಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಬೋಫೋರ್ಸ್ ಹಗರಣದ ಆರೋಪಿ ಒಟ್ಟಾವಿಯೊ ಕ್ವಟ್ರೋಚಿಯಿಂದ ನಮಗೆಷ್ಟು ಹಣ ಸಂದಾಯವಾಗಿದೆ ಎಂದು ಸೋನಿಯಾ ಗಾಂಧಿಯಿಂದ ತಿಳಿದುಕೊಳ್ಳಿ ಎಂದು ರಾಹುಲ್ ಗಾಂಧಿಗೆ ಹೇಳಿದ್ದಾರೆ.

ನಿರಂತರವಾಗಿ ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಆರೋಪ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಷ್ಮಾ ಸ್ವರಾಜ್, ರಾಹುಲ್ ಗಾಂಧಿಗೆ ರಜೆ ತೆಗೆದುಕೊಳ್ಳುವುದೆಂದರೆ ಬಹಳ ಇಷ್ಟ, ಈ ಬಾರಿ ರಜೆ ತೆಗೆದುಕೊಂಡಾಗ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳಲಿ ಜೊತೆಗೆ ಭೋಪಾಲ್ ಅನಿಲ ದುರಂತ ಘಟನೆ ಅಪರಾಧಿ ಆಂಡ್ರಸನ್ ತಪ್ಪಿಸಿಕೊಳ್ಳಲು ಕಾರಣ ಯಾರು, ಬೋಫೋರ್ಸ್ ಹಗರಣದ ಆರೋಪಿ ಒಟ್ಟಾವಿಯೊ ಕ್ವಟ್ರೋಚಿ ಪ್ರಕರಣದಲ್ಲಿ ನಿಮಗೆಷ್ಟು ಹಣ ಸಂದಾಯವಾಗಿದೆ ಎಂಬುದನ್ನು ಸೋನಿಯಾ ಗಾಂಧಿಯಿಂದ ತಿಳಿದುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.