ದೇಶ

ನಿತೀಶ್ ಕುಮಾರ್ 15 ವರ್ಷಗಳಿಂದ ಜಂಗಲ್ ರಾಜ್ ಸರ್ಕಾರ ನಡೆಸ್ತಿದ್ದಾರೆ: ಶಾ

ಕಳೆದ 15 ವರ್ಷಗಳಿಂದ ಬಿಹಾರ್‌ ಜಂಗಲ್ ರಾಜ್ ರಾಜ್ಯವಾಗಿ ಪರಿವರ್ತನೆಗೊಂಡಿದೆ ಎಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿಹಾರ್ ಸಿಎಂ...

ನಿತೀಶ್ ಕುಮಾರ್ 15 ವರ್ಷಗಳಿಂದ ಜಂಗಲ್ ರಾಜ್ ಸರ್ಕಾರ ನಡೆಸ್ತಿದ್ದಾರೆ: ಶಾ
ಅಮಿತ್ ಶಾ
Published On :

ಗಯಾ(ಬಿಹಾರ್): ಕಳೆದ 15 ವರ್ಷಗಳಿಂದ ಬಿಹಾರ್‌ ಜಂಗಲ್ ರಾಜ್ ರಾಜ್ಯವಾಗಿ ಪರಿವರ್ತನೆಗೊಂಡಿದೆ ಎಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬಿಹಾರ್ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಗಸ್ಟ್ 9 ರಂದು ಮಹಾತ್ಮ ಗಾಂಧಿ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿ ಎಂದು ಕರೆ ನೀಡಿದ್ದರು. ಬಿಹಾರ್ ಜನತೆ ಕೂಡಾ ಇಂದು ಜಂಗಲ್ ರಾಜ್ ಅಂತ್ಯಗೊಳಿಸುತ್ತೇವೆ ಎಂದು ಘೋಷಿಸಿ ಎನ್‌ಡಿಎ ಸರಕಾರವನ್ನು ಅಧಿಕಾರಕ್ಕೆ ತರುವ ಪಣ ತೊಡಬೇಕು ಎಂದು ಕರೆ ನೀಡಿದರು.

ಎನ್‌ಡಿಎ ಸರಕಾರ ದೇಶದ ಈಶಾನ್ಯ ಭಾಗವನ್ನು ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು. ಮೋದಿಜಿಯವರು ರಾಜ್ಯದ ಪ್ರತಿಯೊಂದು ಗ್ರಾಮಕ್ಕೆ ನೀರು, ವಿದ್ಯುತ್, ಉದ್ಯೋಗ ಕೊಡಬೇಕು ಎಂದು ಬಯಸಿದ್ದಾರೆ. ಬಿಹಾರ್ ಅಭಿವೃದ್ಧಿಯಾಗಬೇಕು ಎನ್ನುವುದೇ ಮೋದಿ ಕನಸಾಗಿದೆ ಎಂದು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.