ಸಾಮಾಜಿಕ ಜಾಲತಾಣ ಸಂದೇಶ ನಿಯಂತ್ರಣಕ್ಕೆ ಬೇಕು ಕಾನೂನು
ಸಾಮಾಜಿಕ ಜಾಲ ತಾಣಗಳಲ್ಲಿ ಇನ್ನೊಬ್ಬರ ವಿರುದ್ಧ ಮಾನಹಾನಿಕಾರಕ, ದ್ವೇಷ ಬಿತ್ತುವ ಸಂದೇಶಗಳನ್ನು ಪರಿಸರಿಸಲು ಮುಕ್ತ ಅವಕಾಶ ಇರಬಾರದು. ಇಂಥ ...

ನವದೆಹಲಿ: ಸಾಮಾಜಿಕ ಜಾಲ ತಾಣಗಳಲ್ಲಿ ಇನ್ನೊಬ್ಬರ ವಿರುದ್ಧ ಮಾನಹಾನಿಕಾರಕ, ದ್ವೇಷ ಬಿತ್ತುವ ಸಂದೇಶಗಳನ್ನು ಪರಿಸರಿಸಲು ಮುಕ್ತ ಅವಕಾಶ ಇರಬಾರದು. ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾನೂನೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಾಮಾಜಿಕ, ಜಾಲತಾಣಗಳ ದುರುಪಯೋಗ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ನ್ಯಾ. ದೀಪಕ್ ಮಿಶ್ರಾಮತ್ತು ನ್ಯಾ. ಪ್ರಫುಲ್ಲಾ ಸಿ. ಪಂತ್ ಅವರಿದ್ದ ಪೀಠ, ಸಂಸತ್ತು ಈ ಸಂಬಂಧ ಹೊಸ ಕಾಯ್ದೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದೆ ಎಂದು ``ದ ಟೈಮ್ಸ್ ಆಫ್ ಇಂಡಿಯಾ'' ವರದಿ ಮಾಡಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಕಲಂ 66ಎ ಅನ್ನು ರದ್ದು ಮಾಡಿತ್ತು. ಈ ಕಲಂ ಅಸ್ಪಸ್ಟವಾಗಿತ್ತು. ಜತೆಗೆ ಅದರ ರಚನೆಯೂ ಸರಿಯಾಗಿರಲಿಲ್ಲ. ಆದರೆ, ನಾವು ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯಲು ಹೊಸ ಕಾನೂನು ಜಾರಿಗೆ ತರುವಂತೆ ಮನವಿ ಮಾಡಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


