ಹೆಂಡ್ತಿಯನ್ನು ಆಕೆಯ ಪ್ರಿಯಕರನಿಗೆ ಮದ್ವೆ ಮಾಡಿ ಕೊಟ್ಟ ಪತಿ
ಇದು ಬಾಲಿವುಡ್ ಸಿನಿಮಾ ಕಥೆಯೇನಲ್ಲ, ನಿಜ ಜೀವನದಲ್ಲಿ ನಡೆದಿದ್ದು. ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ಬಿಕಾಪುರ್ ಗ್ರಾಮದಲ್ಲಿ ಚಂದಾ...

ಫೈಜಾಬಾದ್ : ಇದು ಬಾಲಿವುಡ್ ಸಿನಿಮಾ ಕಥೆಯೇನಲ್ಲ, ನಿಜ ಜೀವನದಲ್ಲಿ ನಡೆದಿದ್ದು. ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ಬಿಕಾಪುರ್ ಗ್ರಾಮದಲ್ಲಿ ಚಂದಾ ಎಂಬಾಕೆಯ ಲವ್ ಸ್ಟೋರಿ ಇದು.
ಬಿಕಾಪುರ್ ನಿವಾಸಿಯಾದ ಚಂದಾ ಎಂಬಾಕೆ ಅದೇ ಗ್ರಾಮದಲ್ಲಿದ್ದ ಸೂರಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಪೋಷಕರ ಒತ್ತಾಯದ ಮೇರೆಗೆ 2012ರಲ್ಲಿ ಫೂಲ್ ಚಂದ್ ಎಂಬಾತನನ್ನು ಮದುವೆಯಾದಳು. ಫೂಲ್ ಚಂದ್ ಪಕ್ಕದ ಗ್ರಾಮವಾದ ಪಲಿಪೂರಬ್‌ನವ.
ಮದುವೆ ಆದ ಕೆಲವು ಸಮಯಗಳ ನಂತರ ಫೂಲ್‌ಚಂದ್ ಸಂಪಾದನೆಗಾಗಿ ಜಲಂದರ್‌ಗೆ ಹೋಗಬೇಕಾಗಿ ಬಂತು. ದೂರದ ಜಲಂದರ್‌ನಲ್ಲಿದ್ದ ಪತಿಯ ಜತೆ ಚಂದಾಳದ್ದು ಫೋನ್ ಮೂಲಕ ಸಂಭಾಷಣೆ ನಡೆಯುತ್ತಲೇ ಇರುತ್ತಿದ್ದು. ಈ ಮಧ್ಯೆ ಸೂರಜ್ ಪಲಿಪೂರಂದ್ ನಲ್ಲಿರು ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದು, ಆತ ತನ್ನ ಹಳೆಯ ಪ್ರೇಯಸಿ ಚಂದಾ ಜತೆಗೆ ನಿಕಟವಾಗ ತೊಡಗಿದ್ದು. ಸೂರಜ್‌ನ ಸಂಬಂಧಿಕರ ಮನೆ ಚಂದಾಳ ಮನೆಯ ಹತ್ತಿರವೇ ಆಗಿದ್ದರಿಂದ ಚಂದಾ ಮತ್ತು ಸೂರಜ್‌ನ ಭೇಟಿ ಆಗಾಗ್ಗೆ ಆಗುತ್ತವೇ ಇರುತ್ತಿತ್ತು. ಈ ನಡುವೆ ಚಂದಾ ಅವನ ಮನೆಗೂ ಹೋಗಿ ಬರುತ್ತಿದ್ದಳು.
ಆಗಸ್ಟ್ 4 ನೇ ತಾರೀಖಿಗೆ ಫೂಲ್‌ಚಂದ್ ವಾಪಸಾದಾಗ ಅವನಿಗೆ ಅಚ್ಚರಿ ಕಾದಿತ್ತು. ಚಂದಾ ತನಗೆ ಫೂಲ್‌ಚಂದ್ ಮದುವೆ ವೇಳೆ ನೀಡಿದ ಉಡುಪು, ಹಣ ಎಲ್ಲವನ್ನೂ ವಾಪಸ್ ನೀಡಿ, ತನ್ನ ಪ್ರೇಮಕಥೆಯನ್ನು ಬಿಚ್ಚಿಟ್ಟಳು.
ಆಕೆ ನನ್ನಲ್ಲಿ ಎಲ್ಲ ಸತ್ಯವನ್ನು ಹೇಳಿದ್ದರಿಂದ ಖುಷಿಯಾಯ್ತು. ಅದೇ ವೇಳೆ ಬೇಸರ, ಸಿಟ್ಟು ಎಲ್ಲವೂ ಏಕಕಾಲಕ್ಕೆ ಬಂತು. ಆದರೆ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸಿದೆ.
ಆಕೆಯ ಅಪ್ಪನ ಜತೆ ಮಾತನಾಡಿದೆ. ಆಮೇಲೆ ಸೂರಜ್ ಕುಟುಂಬದವರೊಂದಿಗೆ ಮಾತನಾಡಿ, ಪಂಚಾಯತಿ ಮಾಡಿಸಿ ಎಲ್ಲರನ್ನೂ ಒಪ್ಪಿಸಿದೆ. ಚಂದಾ ಮತ್ತು ಸೂರಜ್ ಮದುವೆಗೆ ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿದೆ ಅಂತಾರೆ ಫೂಲ್‌ಚಂದ್.
ಎಲ್ಲರೂ ಒಪ್ಪಿಗೆ ಕೊಟ್ಟ ವೇಳೆ ಫೂಲ್ ಚಂದ್‌ನ ಕುಟುಂಬ ಗುರುವಾರ ಅಲ್ಲಿನ ಶಿವ ದೇವಾಲಯದಲ್ಲಿ ಚಂದಾ ಮತ್ತು ಸೂರಜ್‌ರ ವಿವಾಹವನ್ನು ನೆರವೇರಿಸಿಕೊಟ್ಟರು.
ವಿವಾಹದ ನಂತರ ಅದ್ಧೂರಿ ಭೋಜನ ಕೂಟ ಏರ್ಪಡಿಸಿದ್ದ ಫೂಲ್‌ಚಂದ್‌ನ ಕುಟುಂಬ, ಹೆಣ್ಣು ಗಂಡನ ಮನೆಗೆ ಹೊರಡುವ ವೇಳೆ ಸಾಕಷ್ಟು ಉಡುಗೊರೆಗಳನ್ನು ಕೊಟ್ಟು ಹರಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


