ಪಾಕಿಸ್ತಾನದಲ್ಲಿರುವ ಗೀತಾ ನಮ್ಮ ಮಗಳು: ಉತ್ತರ ಪ್ರದೇಶ ದಂಪತಿ
ಪಾಕಿಸ್ತಾನದಲ್ಲಿ ಸಿಲುಕಿರುವ ಭಾರತ ಮೂಲದ 22ರ ಹರೆಯದ ಯುವತಿ, ಮಾತು ಬಾರದ ಗೀತಾ ತಮ್ಮ ಮಗಳು ಎಂದು ಉತ್ತರ ಪ್ರದೇಶದ ದಂಪತಿಗಳು...

ಲಖನೌ: ಪಾಕಿಸ್ತಾನದಲ್ಲಿ ಸಿಲುಕಿರುವ ಭಾರತ ಮೂಲದ 22ರ ಹರೆಯದ ಯುವತಿ, ಮಾತು ಬಾರದ ಗೀತಾ ತಮ್ಮ ಮಗಳು ಎಂದು ಉತ್ತರ ಪ್ರದೇಶದ ದಂಪತಿಗಳು ಹೇಳಿಕೊಂಡಿದ್ದಾರೆ.
ಪ್ರತಾಪಗಢ ಜಿಲ್ಲೆಯ ಧಮೋಹನ್ ಗ್ರಾಮದ ದಂಪತಿಗಳಾದ ರಾಜರಾಮ್ ಗೌತಮ್ ಹಾಗೂ ಅನರಾ ದೇವಿ ಅವರು ಕಳೆದ 13 ವರ್ಷಗಳಿಂದ ಪಾಕಿಸ್ತಾನದಲ್ಲಿ ನೆಲೆಸಿರುವ ಗೀತಾ ನಮ್ಮ ಮಗಳು, ಅವಳ ಹೆಸರು ಸವಿತಾ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಆ ಯುವತಿಯನ್ನು ತಮಗೆ ಒಪ್ಪಿಸಬೇಕು ಎಂತು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಹೇಶಗಂಜ್ ಪೊಲೀಸ್ ಠಾಣೆಗೆ ಭೇಟಿ ನೀಡಿರುವ ದಂಪತಿ, ಗೀತಾಗಳನ್ನು ತಮಗೆ ಒಪ್ಪಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.
ನಮ್ಮ ಮನೆಯಲ್ಲಿ ಟಿವಿ ಇಲ್ಲ. ಹೀಗಾಗಿ ಗೀತಾ ವರದಿಯನ್ನು ನಾವು ಗಮನಿಸಲಿಲ್ಲ. ಆದರೆ, ನಮ್ಮ ಸಂಬಂಧಿಗಳು ಆಕೆಯನ್ನು ಟಿವಿಯಲ್ಲಿ ನೋಡಿ ನಮಗೆ ತಿಳಿಸಿದ್ದಾರೆ ಎಂದು ಅನರಾ ದೇವಿ ಹೇಳಿದ್ದಾರೆ.
'ಆಕೆಯ ಹೆಸರು ಗೀತಾ ಅಲ್ಲ, ಸವಿತಾ, ನಮ್ಮ ಐದು ಮಕ್ಕಳಲ್ಲಿ ಅವಳು ಒಬ್ಬಳು, ಸವಿತಾಗೆ ಹುಟ್ಟಿನಿಂದಲೇ ಮಾತು ಬರುವುದಿಲ್ಲ. ನಾವು ಬಿಹಾರದ ಚಪ್ರಾ ಜಿಲ್ಲೆಯ ಆಶ್ರಮವೊಂದಕ್ಕೆ ಭೇಟಿ ನೀಡಿದಾಗ ಸವಿತಾ ತಪ್ಪಿಸಿಕೊಂಡಿದ್ದಳು. ಅವಳಿಗಾಗಿ ನಾವು ಸಾಕಷ್ಟು ಹುಡುಕಾಟ ನಡೆಸಿದೇವು. ಆದರೆ ಸಿಗಲಿಲ್ಲ' ಎಂದು ಅನರಾ ದೇವಿ ತಿಳಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ರಾಜೇಶ್ ಕುಮಾರ್ ಹಾಗೂ ರಾಮ್ ದುಲಾರಿ ದಂಪತಿ ವಾಹಿನಿಗಳ ಮೂಲಕ ಗೀತಾ ತಮ್ಮ ಮಗಳೆಂದು ಹೇಳಿಕೊಂಡಿದ್ದರು. ಆದರೆ ಅವರನ್ನು ಆಕೆ ಹೆತ್ತವರೆಂದು ಗುರುತಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


