ದೇವ ಮಹಿಳೆ ರಾಧೆ ಮಾ ಅವರ 'ನಿಗೂಢ ಲೋಕ'ದಲ್ಲೇನಿದೆ?
ತುಂಡುಡುಗೆ ತೊಟ್ಟು ವಿವಾದಕ್ಕೀಡಾಗಿರುವ ದೇವ ಮಹಿಳೆ ರಾಧೆ ಮಾ ಅವರ ನಿಗೂಢ ಲೋಕದ ಬಗ್ಗೆ ಈಗ ಒಂದೊಂದೇ ವಿಷಯಗಳು ಬಹಿರಂಗವಾಗುತ್ತಿವೆ....

ನವದೆಹಲಿ: ತುಂಡುಡುಗೆ ತೊಟ್ಟು ವಿವಾದಕ್ಕೀಡಾಗಿರುವ ದೇವ ಮಹಿಳೆ ರಾಧೆ ಮಾ ಅವರ ನಿಗೂಢ ಲೋಕದ ಬಗ್ಗೆ ಈಗ ಒಂದೊಂದೇ ವಿಷಯಗಳು ಬಹಿರಂಗವಾಗುತ್ತಿವೆ.
ಚೋಟಿ ಮಾ ಮತ್ತು ತಲ್ಲೀ ಬಾಬಾ ಇವರಿಬ್ಬರೂ ರಾಧೆ ಮಾ ಅವರ ಪರಮಾಪ್ತರು. ರಾಧೆ ಮಾ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಇವರಿಬ್ಬರ ಬಗ್ಗೆಯೇ ಮಾಹಿತಿ ನೀಡಲಾಗಿದೆ.
ರಾಧೆ ಮಾ ಅವರನ್ನು ನೇರ ಭೇಟಿಯಾಗಬೇಕಿದ್ದರೆ, ತಲ್ಲಿ ಬಾಬಾ ಅವರನ್ನು ಮೊದಲು ಭೇಟಿಯಾಗಬೇಕು. ತಲ್ಲಿ ಬಾಬಾ ಓಕೆ ಅಂದ ಮೇಲೆ ಅವರು ಚೋಟಿ ಮಾ ಅವರಲ್ಲಿಗೆ ಕಳುಹಿಸಿಕೊಡುತ್ತಾರೆ. ಅಲ್ಲಿ ಚೋಟಿ ಮಾ ಭಕ್ತರ ಸಂದರ್ಶನ ಮಾಡಿ ಆಮೇಲೆ ಅವರನ್ನು ರಾಧೆ ಮಾ ಅವರ ದರ್ಶನಕ್ಕೆ ಅನುಮತಿ ನೀಡಲಾಗುವುದು.
ವೆಬ್‌ಸೈಟಿನಲ್ಲಿ ಚೋಟಿ ಮಾ, ತಲ್ಲಿ ಬಾಬಾ ಬಗ್ಗೆ ಕೊಟ್ಟಿರುವ ವಿವರಗಳು ಹೀಗಿವೆ
ಚೋಟಿ ಮಾ
ಚೋಟಿ ಮಾ ಅವರು ಗುರು ಮಾ ಅವರ ಪರಮಾಪ್ತೆ. ಚೋಟಿ ಮಾ ಅವರ ಮಾತುಗಳನ್ನು ಎಲ್ಲರು ಕೇಳಲೇ ಬೇಕು. ಅವರ ಆದೇಶಗಳೆಂದರೆ ಗುರು ಮಾ ಅವರು ಸ್ವತಃ ಹೇಳಿದಂತೆಯೆ. ಚೋಟಿ ಮಾ ಚಿಕ್ಕವಳಿರುವಾಗಲೇ ಇಲ್ಲಿದ್ದು ಗುರು ಮಾ ಅವರ ಸೇವೆ ಮಾಡುತ್ತಿದ್ದಾರೆ. ಭಕ್ತರು ತಮ್ಮ ಸಮಸ್ಯೆಗೆ ಪರಿಹಾರ ಬಯಸುತ್ತಿದ್ದರೆ ಅಂಥವರು ಚೋಟಿ ಮಾ ಅವರ ವಚನ ಪ್ರವಚನ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕು. ಚೋಟಿ ಮಾ ಅವರು ಗುರು ಮಾ ಅವರ ಸಂದೇಶಗಳ ವಾಹಕವಾಗಿದ್ದಾರೆ. ಚೋಟಿ ಮಾ ವಚನ ಪ್ರವಚನ ಮಾಡುವಾಗ ಭಕ್ತರ ಹೊರತಾಗಿ ಯಾರೊಬ್ಬರನ್ನು ಒಳಗೆ ಬಿಡುವುದಿಲ್ಲ.
ತಲ್ಲೀ ಬಾಬಾ
ಮಮತಾಮಯೀ ಶ್ರೀ ರಾಧೆ ಮಾ ಅವರ ಸೇವಕ ಈ ತಲ್ಲಿ ಬಾಬಾ. ತಲ್ಲಿ ಅಂದರೆ ಪಂಜಾಬಿ ಭಾಷೆಯಲ್ಲಿ ಗಂಟೆ. ಗುರು ಮಾ ನೀಡಿರುವುದರಿಂದಲೇ ಈ ಹೆಸರು ವಿಶೇಷವಾಗಿದೆ. ಗುರು ಮಾ ಅವರ ಜಾಗರಣ್,ವಚನ ಎಲ್ಲದರ ಬಗ್ಗೆಯೂ ಭಕ್ತರಿಗೆ ಮಾಹಿತಿ ಕೊಡುವವರು ತಲ್ಲೀ ಬಾಬಾ. ದೇವಾಲಯದ ಒಳಗೆ ಹೋಗುವಾಗ ಗಂಟೆ ಬಾರಿಸಿ ಒಳಗೆ ಹೋಗುವಂತೆ ಗುರು ಮಾ ಅವರನ್ನು ಭೇಟಿಯಾಗಬೇಕಾದರೆ ಅವರು ತಲ್ಲಿ ಬಾಬಾ ನನ್ನು ಮೊದಲು ಭೇಟಿಯಾಗಬೇಕು. ಗುರು ಮಾ ಅವರ ಬಗ್ಗೆ ಎಲ್ಲ ಮಾಹಿತಿಗಳನ್ನು ತಲ್ಲಿ ಬಾಬಾ ನೀಡುತ್ತಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


