ಬಿಜೆಪಿ ರೈತ ಚೈತನ್ಯಯಾತ್ರೆ
ಆತ್ಮಹತ್ಯೆ ಹಾದಿ ಹಿಡಿದಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು, ಕರ್ನಾಟಕ ಸರ್ಕಾರವನ್ನು ಎಚ್ಚರಿಸಲು ಬಿಜೆಪಿ ರಾಜ್ಯ ಘಟಕ `ರೈತ ಚೈತನ್ಯ ಯಾತ್ರೆ' ...

ನವದೆಹಲಿ: ಆತ್ಮಹತ್ಯೆ ಹಾದಿ ಹಿಡಿದಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು, ಕರ್ನಾಟಕ ಸರ್ಕಾರವನ್ನು ಎಚ್ಚರಿಸಲು ಬಿಜೆಪಿ ರಾಜ್ಯ ಘಟಕ `ರೈತ ಚೈತನ್ಯ ಯಾತ್ರೆ' ಹಮ್ಮಿಕೊಂಡಿದೆ. ಆ. 31 ರಿಂದ ಸೆ.14ರ ವರೆಗೆ ವರೆಗೆ ಹಾವೇರಿಯಿಂದ ಮೈಸೂರುವರೆಗೆ ಎರಡು ತಂಡಗಳಲ್ಲಿ ಯಾತ್ರೆ ನಡೆಸಲಾಗುತ್ತದೆ. ಯಾತ್ರೆ ವೇಳೆ 75 ಸ್ಥಳಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ.
ದೆಹಲಿಯಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ರಾಜ್ಯದ ಬಿಜೆಪಿ ಸಂಸ ದರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಷಿ ತಿಳಿಸಿದರು. ಈ ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಬರ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದಾಗ ರೈತರ ಬೆಳೆ ಸಾಲ ಮನ್ನಾ ಮಾಡಿತ್ತು.
ಸಿದ್ಧರಾಮಯ್ಯ ಸರ್ಕಾರವೂ ಬೆಳೆ ಸಾಲ ಮನ್ನಾ ಮಾಡಿ ರೈತರಿಗೆ ರೈತರಿಗೆ ನೆರವಾಗಬೇಕು ಎಂದರು. 14ನೇ ಹಣಕಾಸು ಆಯೋಗದಡಿ ಇದುವರೆಗೆ ರು. 8,550 ಕೋಟಿಯನ್ನು ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಅದನ್ನು ರೈತರ ಸಂಕಷ್ಟ ನಿವಾರಿಸಲು ಬಳಸಿಕೊಳ್ಳಬೇಕು. ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ಪಡೆಯಲು ರಾಜ್ಯ ಸರ್ಕಾರ ಇದುವರೆಗೆ ಪ್ರಸ್ತಾಪ ಸಲ್ಲಿಸಿಲ್ಲ. ಸಲ್ಲಿಸಿದರೆ ಕೇಂದ್ರ ನೆರವು ಒದಗಿಸುತ್ತದೆ ಎಂದರು.
ಸ್ಥಳಾಂತರ ಇಲ್ಲ: ತುಮಕೂರಿನ ಗುಬ್ಬಿಯಲ್ಲಿ ಎಚ್‍ಎಎಲ್ ಸ್ಥಾಪಿಸಲುದ್ದೇಶಿಸಿರುವ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಸ್ಥಳಾಂತರಿಸುವ ಪ್ರಸ್ತಾಪ ಇಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಸ್ಪಷ್ಟಪಡಿಸಿದ್ದಾರೆಂದು ಜೋಷಿ ತಿಳಿಸಿದ ರು. ಭೂ ಸ್ವಾದೀನ ಪ್ರಕ್ರಿಯೆ ವಿಳಂಬವಾಗಿದೆ. ಜತೆಗೆ ಪ್ರಕರಣವೂ ಕೋರ್ಟಲ್ಲಿರುವುದರಿಂದ ರಾಜ್ಯ ತನ್ನ ಅಧಿಕಾರ ಬಳಸಿ, ತ್ವರಿತವಾಗಿ ಇತ್ಯ ರ್ಥಪಡಿಸಿಕೊಳ್ಳಬೇಕು ಎಂದು ಪರ್ರಿಕರ್ ತಿಳಿಸಿ ದ್ದಾರೆಂದರು ಜೋಶಿ. ಬೆಂಗಳೂರಿನಲ್ಲಿ ನಡೆಯು ತ್ತಿರುವ ಏರೋ ಇಂಡಿಯಾ ಪ್ರದರ್ಶನವನ್ನು ಗೋವಾಕ್ಕೆ ತಾಂತ್ರಿಕ ಕಾರಣಗಳಿಗಾಗಿ ಸ್ಥಳಾಂತರಿ ಸುವ ಪ್ರಸ್ತಾಪ ಇದೆ. ಒಂದು ವೇಳೆ ರಾಜ್ಯ ಸರ್ಕಾರ ಬೆಂಗಳೂರಲ್ಲೇ ಮುಂದುವರಿಸಲು ಬಯಸಿದರೆ ನಮ್ಮ ಬೆಂಬಲ ಇದೆ. ಸಂಚಾರ ದಟ್ಟಣೆ ಮತ್ತು ವಿಮಾನ ಸಂಚಾರಕ್ಕೆ ಅಡಚಣೆ ಕಾರಣಕ್ಕೆ ಸ್ಥಳಾಂತರಿಸುವ ಪ್ರಸ್ತಾಪ ಇದೆ. ರಕ್ಷಣಾ vಸಚಿವರು ಗೋವಾದವರು ಎಂಬ ಕಾರಣಕ್ಕಲ್ಲ ಎಂದೂ ಪ್ರಹ್ಲಾದ ಜೋಷಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


