ಪ್ರೇಮಿಗಳ ತಲೆಬೋಳಿಸಿ, ನಗ್ನಗೊಳಿಸಿ ಪರೇಡ್ ಮಾಡಿಸಿದ ಗ್ರಾಮಸ್ಥರು
ಪ್ರೇಮಿಗಳೆಂದರೆ ಕ್ರೂರವಾಗಿ ನಡೆದುಕೊಳ್ಳುವುದು ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿ ಹೊಗಿದೆ. ಇದಕ್ಕೆ ಉದಾಹರಣೆಯಾಗಿ ವಾರಣಾಸಿ ಘಟನೆಯೊಂದು ನಡೆದಿದ್ದು, ಇಲ್ಲಿನ ಗ್ರಾಮಸ್ಥರು ಪ್ರೇಮಿಗಳಿಬ್ಬರಿಗೆ ತಲೆಬೋಳಿಸಿದ್ದಲ್ಲದೇ ಅವರಿಬ್ಬರನ್ನೂ...

ಲಖನೌ: ಪ್ರೇಮಿಗಳೆಂದರೆ ಕ್ರೂರವಾಗಿ ನಡೆದುಕೊಳ್ಳುವುದು ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿ ಹೊಗಿದೆ. ಇದಕ್ಕೆ ಉದಾಹರಣೆಯಾಗಿ ವಾರಣಾಸಿ ಘಟನೆಯೊಂದು ನಡೆದಿದ್ದು, ಇಲ್ಲಿನ ಗ್ರಾಮಸ್ಥರು ಪ್ರೇಮಿಗಳಿಬ್ಬರಿಗೆ ತಲೆಬೋಳಿಸಿದ್ದಲ್ಲದೇ ಅವರಿಬ್ಬರನ್ನೂ ನಗ್ನಗೊಳಿಸಿ ಗ್ರಾಮದ ಸುತ್ತ ಪರೇಡ್ ಮಾಡಿರುವ ಘಟನೆ ಬಾರ್ಗವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಪ್ರೇಮಿಗಳಿಬ್ಬರು ಹಲವು ವರ್ಷಗಳಿಂದ ಪ್ರೀತಿಸಿದ್ದರು. ಆದರೆ, ಇವರಿಬ್ಬರ ಮದುವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧದ ನಡುವೆಯೂ ಊರು ಬಿಟ್ಟು ಹೋಗಿ ಮದುವೆಯಾದ ಪ್ರೇಮಿಗಳಿಬ್ಬರೂ ನಾಲ್ಕು ದಿನಗಳ ಹಿಂದಷ್ಟೇ ಊರಿಗೆ ಮರಳಿಬಂದಿದ್ದರು. ಈ ಇಬ್ಬರನ್ನು ಕಂಡ ಗ್ರಾಮಸ್ಥರು ಕೆಂಡಾಮಂಡಲವಾಗಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರಿಗೂ ಬಲವಂತದಿಂದ ತಲೆಬೋಳಿಸಿ, ನಗ್ನಗೊಳಿಸಿ ನಂತರ ಊರಿನ ಸುತ್ತ ಪರೇಡ್ ಮಾಡಿಸಿದ್ದಾರೆ.
ತಮ್ಮ ಮಗ ನಗ್ನವಾಗಿ ಊರಿನ ಸುತ್ತ ಓಡಾಡುತ್ತಿರುವುದನ್ನು ಕಂಡ ಯುವಕನ ತಂದೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಆದರೆ, ರಕ್ಷಣೆ ಮಾಡಲು ಮುಂದಾಗದ ಪೋಲೀಸರು ಆತನನ್ನು ಲೇವಡಿ ಮಾಡಲು ಪ್ರಾರಂಭಿಸಿದ್ದು, ತಮ್ಮ ನಾಯಕ ಮೋದಿಯವರ ಬಳಿ ಹೋಗಿ ದೂರು ನೀಡುವಂತೆ ಹೇಳಿದ್ದಾರೆ.
ಗ್ರಾಮಸ್ಥರ ಹಲ್ಲೆಗೊಳಗಾದ ಯುವಕ ಘಟನೆ ಕುರಿತಂತೆ ಮಾತನಾಡಿದ್ದು, ಗ್ರಾಮಸ್ಥರು ನಮ್ಮಿಬ್ಬರ ತಲೆ ಬೋಳಿಸಿದರಲ್ಲದೇ ನಗ್ನಗೊಳಿಸಿ ಬಲವಂತವಾಗಿ ಗ್ರಾಮದ ಸುತ್ತ ಓಡಾಡಿಸಿದರು. ವಿವಾಹಕ್ಕೆ ಮೊದಲು ನಮ್ಮ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎರಡು ದಿನಗಳ ಹಿಂದಷ್ಟೇ ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


