ಸ್ವಯಂಘೋಷಿತ ದೇವಮಾನ ಅಸಾರಾಂ ಬಾಪುಗೆ ರಾಜಸ್ಥಾನ ಪಠ್ಯ ಪುಸ್ತಕದಲ್ಲಿ ಜಾಗ!
ಅತ್ಯಾಚಾರದ ಆರೋಪ ಎದುರಿಸುತ್ತಿರುವ, ಸ್ವಯಂಘೋಷಿತ ದೇವಮಾನ ಅಸಾರಾಂ ಬಾಪುನಿಗೆ ರಾಜಸ್ಥಾನದಲ್ಲಿ ಇನ್ನೂ ಸಂತನ ಸ್ಥಾನವಿದೆ. ಸ್ವಾಮಿ ವಿವೇಕಾನಂದ, ಗುರುನಾನಕ್, ರಾಮಕೃಷ್ಣ ಪರಮಹಂಸರಂಥ ಮಹಾತ್ಮರ...

ಜೋಧಪುರ: ಅತ್ಯಾಚಾರದ ಆರೋಪ ಎದುರಿಸುತ್ತಿರುವ, ಸ್ವಯಂಘೋಷಿತ ದೇವಮಾನ ಅಸಾರಾಂ ಬಾಪುನಿಗೆ ರಾಜಸ್ಥಾನದಲ್ಲಿ ಇನ್ನೂ ಸಂತನ ಸ್ಥಾನವಿದೆ. ಸ್ವಾಮಿ ವಿವೇಕಾನಂದ, ಗುರುನಾನಕ್, ರಾಮಕೃಷ್ಣ ಪರಮಹಂಸರಂಥ ಮಹಾತ್ಮರ ಸ್ಥಾನದಲ್ಲಿ ಅಸಾರಾಂಗೂ ಸ್ಥಾನ ನೀಡಲಾಗಿದೆ!
ಹೌದು, ರಾಜಸ್ಥಾನದ ಎಂಟನೇ ತರಗತಿಯ ನೈತಿಕ ಶಿಕ್ಷಣ ಹಾಗೂ ಜಿಕೆ ಪಠ್ಯ ಪುಸ್ತಕ ``ನಯಾ ಉಜಾಲಾ'' ಪಠ್ಯದಲ್ಲಿ ಅಸಾರಾಂಗೆ ಇಂಥದ್ದೊಂದು ವಿಶೇಷ ಗೌರವ ನೀಡಲಾಗಿದೆ. ಸಂತ ಕಬೀರ್, ಮೀರಾಬಾಯ್, ಮದರ್ ತೆರೇಸಾ ಮತ್ತು ಶಂಕರಾಚಾರ್ಯ ಅವರೂ ಇರುವ ಈ ಪಠ್ಯದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರಿಗೂ
ಸ್ಥಾನ ಕಲ್ಪಿಸಲಾಗಿದೆ.
ಈ ಪಠ್ಯಪುಸ್ತಕವನ್ನು ದೆಹಲಿ ಮೂಲದ ಗುರುಕುಲ್ ಎಜುಕೇಷನ್ ಬುಕ್ಸ್ ಸಂಸ್ಥೆ ಪ್ರಕಟಿಸಿತ್ತು. ಆದರೆ, ಈ ವಿಚಾರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಆ ಪುಸ್ತಕವನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅಸಾರಾಂ 2013ರಿಂದಲೂ ಜೈಲಿನಲ್ಲಿದ್ದಾರೆ. ಹದಿನಾರು ವರ್ಷದ ಬಾಲಕಿ ನೀಡಿದ ದೂರಿನಂತೆ ಅಸಾರಾಂ ಬಂಧಿಸಲಾಗಿತ್ತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


