ಕೊಲ್ಲಿ ದ್ವೀಪಕ್ಕೆ 'ಕಲಾಂ ಐಲ್ಯಾಂಡ್' ಎಂದು ನಾಮಕರಣ
ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥ ದೇಶದ ಅತ್ಯಂತ ಆಧುನಿಕ ಕ್ಷಿಪಣಿ ಉಡಾವಣಾ ಕೇಂದ್ರ ಬಂಗಾಳ ಕೊಲ್ಲಿಯ...

ನವದೆಹಲಿ: ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥ ದೇಶದ ಅತ್ಯಂತ ಆಧುನಿಕ ಕ್ಷಿಪಣಿ ಉಡಾವಣಾ ಕೇಂದ್ರ ಬಂಗಾಳ ಕೊಲ್ಲಿಯ ದ್ವೀಪಕ್ಕೆ ಕಲಾಂ ಐಲ್ಯಾಂಡ್ ಎಂದು ನಾಮಕರಣ ಮಾಡಲು ಸಕಲ ಸಿದ್ಧತೆಗಳು ನಡೆದಿವೆ.
ಅಬ್ದುಲ್ ಕಲಾಂ ಅವರು ತಾವು ಅಭಿವೃದ್ಧಿಪಡಿಸಿದ್ದ ಹಲವು ಕ್ಷಿಪಣಿಗಳನ್ನು ಇದೇ ಜಾಗದಲ್ಲಿ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು. ಅಷ್ಟೇ ಅಲ್ಲದೆ, ಕಲಾಂ ಅವರು ಮೈ ಜರ್ನಿ ಪುಸ್ತಕದಲ್ಲಿನ ಕೆಲ ಪದ್ಯಗಳನ್ನು ಬರೆಯಲು ಈ ದ್ವೀಪದಲ್ಲಿನ ಪ್ರಶಾಂತತೆ ಹಾಗೂ ಸಮುದ್ರ ಗಾಂಭೀರ್ಯಗಳು ಸ್ಫೂರ್ತಿಯಾಗಿದ್ದವು ಎಂದು ಹೇಳಿದ್ದರು.
ಜುಲೈ 28 ರಂದು ಇಹಲೋಕ ತ್ಯಜಿಸಿದ ಭಾರತದ ಮಿಸೈಲ್ ಮ್ಯಾನ್ ಹಾಗೂ ವೈಮಾನಿಕ ಇಂಜಿನಿಯರ್ ಕಲಾಂ ಅವರ ಹೆಸರನ್ನು ಈ ರೀತಿ ಅವರು ತುಂಬಾ ಇಷ್ಟಪಡುತ್ತಿದ್ದ ಒರಿಸ್ಸಾದ ಈ ಪುಟ್ಟ ದ್ವೀಪಕ್ಕೆ ಅವರ ಹೆಸರನ್ನಿಡುವ ಮೂಲಕ ದೇಶ ಅವರಿಗೆ ಕೃತಜ್ಞತೆ ಸಲ್ಲಿಸುವುದು ಅಗತ್ಯವಾಗಿದೆ.
ಒರಿಸ್ಸಾ ಕರಾವಳಿಯ ಈ ಪುಟ್ಟ, ಸುಂದರ ದ್ವೀಪ ಎಂದರೆ ಅಬ್ದುಲ್ ಕಲಾಂ ಅವರಿಗೆ ಅಚ್ಚು ಮೆಚ್ಚು ಪ್ರದೇಶವಾಗಿತ್ತು. 1993ರ ನ.30 ರಂದು ಪೃಥ್ವಿ ಕ್ಷಿಪಣಿ ಉಡಾವಣೆಯಾಗಿದ್ದು ಇದೇ ದ್ವೀಪದಲ್ಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


