ಕೂಂಬಿಂಗ್ ಕಾರ್ಯಾಚರಣೆ: ನಕ್ಸಲ್ ಕಮಾಂಡರ್ ಹತ್ಯೆ, ಓರ್ವನ ಬಂಧನ
ನಕ್ಸಲ್ ಪೀಡಿತ ಛತ್ತೀಸ್ ಗಡದ ರಾಯ್ ಪುರದಲ್ಲಿ ಶುಕ್ರವಾರ ನಡೆದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಓರ್ವ ನಕ್ಸಲ್ ಕಮಾಂಡರ್ ನನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ...

ರಾಯ್ ಪುರ: ನಕ್ಸಲ್ ಪೀಡಿತ ಛತ್ತೀಸ್ ಗಡದ ರಾಯ್ ಪುರದಲ್ಲಿ ಶುಕ್ರವಾರ ನಡೆದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಓರ್ವ ನಕ್ಸಲ್ ಕಮಾಂಡರ್ ನನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಛತ್ತೀಸ್ ಗಡ ಕೊಂಡಗಾವ್ ಜಿಲ್ಲೆಯಲ್ಲಿ ನಕ್ಸಲರ ಅವಿತಿರುವಿಕೆ ಕುರಿತು ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಕೂಡಲೇ ಕಾರ್ಯಪ್ರವೃತ್ತರಾದವು. ನಕ್ಸಲರು ಅವಿತಿದ್ದ ಘನೋರಾ ಅರಣ್ಯ ಪ್ರದೇಶವನ್ನು ಸುತ್ತುವರೆದ ಪೊಲೀಸರು ಮತ್ತು ಭದ್ರತಾ ಪಡೆಗಳು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದವು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬರ್ದ ದಳಂನ ನಕ್ಸಲ್ ಕಮಾಂಡರ್ ಫೂಲ್ ಸಿಂಗ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.
ಭದ್ರತಾ ಪಡೆಗಳು ಮತ್ತು ನಕ್ಸಲರ ಪರಸ್ಪರ ಗುಂಡಿನ ಕಾಳಗ ನಡೆಸುತ್ತಿದ್ದಂತೆಯೇ ಶಾಂತವಾಗಿದ್ದ ಅರಣ್ಯ ಪ್ರದೇಶ ಸತತ 2 ತಾಸುಗಳ ಕಾಲ ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು. ಭದ್ರತಾ ಪಡೆಗಳ ಸತತ ಗುಂಡಿನ ಸುರಿಮಳೆಗೆ ಬೆದರಿದ ನಕ್ಸಲರು ಅರಣ್ಯದತ್ತ ಓಡುತ್ತಿದ್ದರು. ಈ ವೇಳೆ ಓರ್ವ ಮಾವೋವಾದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಮಾವೋವಾದಿಯನ್ನು ರಾಕೇಶ್ ಎಂದು ಗುರುತಿಸಲಾಗಿದ್ದು, ಈತ ಅಂತಗಡ ದಳಂನ ಕಮಾಂಡರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಇನ್ನು ಕೂಂಬಿಂಗ್ ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಸಿದ್ದು, ಪರಾರಿಯಾಗಿರುವ ನಕ್ಸಲರಿಗಾಗಿ ಭದ್ರತಾ ಪಡೆಗಳು ಅರಣ್ಯದಲ್ಲಿ ಶೋಧ ಕಾರ್ಯ ಆರಂಭಿಸಿವೆ.
ಘಟನಾ ಸ್ಥಳದಲ್ಲಿ 2 ಹ್ಯಾಂಡ್ ಗ್ರೆನೇಡ್, ನಕ್ಸಲ್ ಸಾಹಿತ್ಯಗಳು, ಕೆಲ ಡೈರಿ, ಔಷಧಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇನ್ನು ಇಲ್ಲಿ ದೊರೆತಿರುವ ಡೈರಿಗಳಲ್ಲಿ ಮತ್ತು ಪುಸ್ತಕಗಳಲ್ಲಿ ನಕ್ಸಲ್ ಚಟುವಟಿಕೆಯ ಕುರಿತು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ. ನಕ್ಸಲರ ಉಪಾಯಗಳು, ಅವರ ಮುಂದಿನ ಗುರಿಗಳು ಮತ್ತು ಅವರ ಗುಂಪಿಗೆ ಸಂಬಂಧಿಸಿದ ಕೆಲ ಮಾಹಿತಗಳು ಅದರಲ್ಲಿವೆ ಎಂದು ಹೇಳಲಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


