ದೇಶ

ರಾಹುಲ್ ಮನೆ ಬಿಟ್ಟು ಓಡಿ ಹೋಗುವ ಬಾಲಕನಂತೆ ಕಾಣುತ್ತಿದ್ದಾರೆ: ಹರಿಯಾಣ ಸಚಿವ

ರಾಹುಲ್ ಗಾಂಧಿ ಮುಖದಲ್ಲಿ ಭಯ ಹಾಗೂ ಆತಂಕ ಕಾಣುತ್ತಿದ್ದು, ಮನೆಬಿಟ್ಟು ಓಡಿಹೋಗುವ ಪುಟ್ಟ ಬಾಲಕನಂತೆ ಕಾಣುತ್ತಿದ್ದಾರೆ ಹೀಗೆಂದು ರಾಹುಲ್ ಗಾಂಧಿ ಅವರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವುದು ಬೇರಾರು...

ರಾಹುಲ್ ಮನೆ ಬಿಟ್ಟು ಓಡಿ ಹೋಗುವ ಬಾಲಕನಂತೆ ಕಾಣುತ್ತಿದ್ದಾರೆ: ಹರಿಯಾಣ ಸಚಿವ
ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹಾಗೂ ರಾಹುಲ್ ಗಾಂಧಿ
Published On :

ನವದೆಹಲಿ: ರಾಹುಲ್ ಗಾಂಧಿ ಮುಖದಲ್ಲಿ ಭಯ ಹಾಗೂ ಆತಂಕ ಕಾಣುತ್ತಿದ್ದು, ಮನೆಬಿಟ್ಟು ಓಡಿಹೋಗುವ ಪುಟ್ಟ ಬಾಲಕನಂತೆ ಕಾಣುತ್ತಿದ್ದಾರೆ ಹೀಗೆಂದು ರಾಹುಲ್ ಗಾಂಧಿ ಅವರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವುದು ಬೇರಾರು ಅಲ್ಲ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್.

ರೈಲು ಮೂಲಕ ಪಂಜಾಬ್ ಪ್ರವಾಸ ಕೈಗೊಂಡಿರುವ ಸುದ್ದಿ ದಿನಪತ್ರಿಕೆಗಳಲ್ಲಿ ಬುಧವಾರ ಪ್ರಕಟಗೊಂಡಿತ್ತು. ಈ ಸುದ್ದಿಯಲ್ಲಿದ್ದ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ನೋಡಿದ ಅನಿಲ್ ವಿಜ್ ಅವರು ಫೋಟೋದಲ್ಲಿ ರಾಹುಲ್ ಗಾಂಧಿ ಅವರನ್ನು ನೋಡಿದರೆ ಮನೆ ಬಿಟ್ಟು ಓಡಿಹೋಗುವ ಬಾಲಕನಂತೆ ಅನ್ನಿಸಿತು. ರಾಹುಲ್ ಗಾಂಧಿ ಮುಖದಲ್ಲಿ ಭಯ ಹಾಗೂ ಆತಂಕವಿರುವಂತೆ ಕಾಣಿಸುತ್ತಿತ್ತು ಎಂದು ತಮ್ಮ ಟ್ವಿಟರ್ ಖಾತೆಯ ಮೂಲಕ ಹೇಳಿದ್ದಾರೆ.

ಭೂ ಮಸೂದೆ ಕಾಯ್ದೆ ವಿರೋಧ ಹಾಗೂ ಅನಿರೀಕ್ಷಿತ ಮಳೆಯಿಂದಾಗಿ ಅಪಾರ ನಷ್ಟ ಹೊಂದಿರುವ ರೈತರ ಸಮಸ್ಯೆಗಳನ್ನು ಅರಿಯುವ ಸಲುವಾಗಿ  ಪಂಜಾಬ್ ಗೆ ಸಾಮಾನ್ಯ ಬೋಗಿಯಲ್ಲಿ ಸಾರ್ವಜನಿಕರೊಂದಿಗೆ ರಾಹುಲ್ ಗಾಂಧಿ ಪ್ರವಾಸ ಹೊರಟಿದ್ದರು. ಈ ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.