ನೇಪಾಳ ಸಂತ್ರಸ್ತರಿಗೆ ಗೋಮಾಂಸದ ಆಹಾರ ಪೂರೈಸಿದ ಪಾಕಿಸ್ತಾನ
ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ನೆರವಿನ ಅಸ್ತ ಚಾಚಿವೆ. ಆದರೆ ಪಾಕಿಸ್ತಾನ ಮಾತ್ರ ನೇಪಾಳ...

ಕಠ್ಮಂಡು: ಭೀಕರ ಭೂಕಂಪದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ನೆರವಿನ ಅಸ್ತ ಚಾಚಿವೆ. ಆದರೆ ಪಾಕಿಸ್ತಾನ ಮಾತ್ರ ನೇಪಾಳ ಸಂತ್ರಸ್ತರ ಜೊತೆಗೆ ಕೀಳು ಮಟ್ಟದ ಬುದ್ದಿಯನ್ನು ಪ್ರದರ್ಶಿಸಿದ್ದು, ಗೋಮಾಂಸ ಆಹಾರವನ್ನು ಕಳುಹಿಸಿಕೊಟ್ಟಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಪ್ರಬಲ ಭೂಕಂಪದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ನೇಪಾಳಿಗರಿಗೆ ಪಾಕಿಸ್ತಾನ ನೆರವಿನ ನೆಪದಲ್ಲಿ ಗೋಮಾಂಸದ ಆಹಾರವನ್ನು ರವಾನೆ ಮಾಡಿದೆ. ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತಲೇ ಕರೆಯಲ್ಪಡುವ ನೇಪಾಳದಲ್ಲಿ ಗೋಮಾಂಸವನ್ನು ತಿನ್ನುವುದಿಲ್ಲ ಬದಲಾಗಿ ಗೋವನ್ನು ಪೂಜಿಸುತ್ತಾರೆ.
ಭೂಕಂಪದಿಂದ ಆಹಾರ ಸಿಗದೇ ಹಸಿದಿದ್ದರೂ ಸಂತ್ರಸ್ಥರು ಪಾಕಿಸ್ತಾನದ ಆಹಾರವನ್ನು ಮುಟ್ಟಿಲ್ಲ. ಜೊತೆಗೆ ಪಾಕಿಸ್ತಾನದ ಹುಚ್ಚಾಟವನ್ನು ಅಲ್ಲಿನ ಪ್ರಧಾನಿಗೆ ಅಧಿಕಾರಿಗಳು ವರದಿ ಮಾಡಿದ್ದು ಪಾಕ್ ಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಮುಂದಾಗಿದೆ.
ಇದೇ ವೇಳೆ ಭಾರತದಿಂದ ಸಂತ್ರಸ್ಥರ ನೆರವಿಗೆ ತೆರಳಿರುವ ವೈದ್ಯರು ಸಹ ಪಾಕಿಸ್ತಾನದ ಆಹಾರವನ್ನು ತಿರಸ್ಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


