ದೇಶ

ಮೆಮೊರಿ ಕಾರ್ಡ್ ಸಿಗದಿದ್ದಕ್ಕೆ ತಂದೆಯನ್ನೇ ಹತ್ಯೆಗೈದ ಮಗ

ಕಂಠ ಪೂರ್ತಿ ಕುಡಿದು ಮಗ ಕ್ಷುಲಕ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದಿರುವ ಘಟನೆ ತೆಲಂಗಾಣದ ಮೆಹಬೂಬ್ ನಗರ್ ಜಿಲ್ಲೆಯಲ್ಲಿ ನಡೆದಿದೆ...

ಮೆಮೊರಿ ಕಾರ್ಡ್ ಸಿಗದಿದ್ದಕ್ಕೆ ತಂದೆಯನ್ನೇ ಹತ್ಯೆಗೈದ ಮಗ
ಸಾಂದರ್ಭಿಕ ಚಿತ್ರ
Published On :

ತೆಲಂಗಾಣ: ಕಂಠ ಪೂರ್ತಿ ಕುಡಿದು ಮಗ ಕ್ಷುಲಕ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದಿರುವ ಘಟನೆ ತೆಲಂಗಾಣದ ಮೆಹಬೂಬ್ ನಗರ್ ಜಿಲ್ಲೆಯಲ್ಲಿ ನಡೆದಿದೆ.

ವಿಪಂಗಾಂಡಲಾ ಗ್ರಾಮದಲ್ಲಿ ವಾಸವಾಗಿರುವ ಜಿ.ರಾಜು ಎಂಬಾತ ಕಂಠ ಪೂರ್ತಿ ಕುಡಿದು ಬಂದಿದ್ದ. ಅಲ್ಲದೇ ಈ ಸಮಯದಲ್ಲಿ ತಾನು ಕಳೆದುಕೊಂಡಿದ್ದ ಮೊಬೈಲ್ ಫೋನ್‌ ಮೆಮೋರಿ ಕಾರ್ಡ್ ಹುಡುಕಿದ್ದು ಸಿಗಲಿಲ್ಲ ಎನ್ನಲಾಗಿದೆ.

ಹಾಗಾಗಿ ಅಲ್ಲಿಯೇ ಇದ್ದ ತಂದೆಯ ಬಳಿ ಮೆಮೊರಿ ಕಾರ್ಡ್ ಬಗೆಗೆ ಕೇಳಿದ್ದಾನೆ. ಆದರೆ ತಂದೆ  ಜಿ.ಹನಮಂತು ತನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ. ಇದೇ ಕಾರಣಕ್ಕೆ ತಂದೆ ಮಗನ ನಡುವೆ ಜಗಳ ನಡೆದಿದ್ದು ಸ್ವಲ್ಪ ಸಮಯದ ನಂತರ ಪುತ್ರ ಹೋಗಿ ಮಲಗಿದ್ದಾನೆ.

ನಂತರ ಮನೆಯಲ್ಲಿ ಎಲ್ಲರೂ ಮಲಗಿದ್ದು ಇದೇ ಸಮಯದಲ್ಲಿ ಮತ್ತೆ ಎದ್ದ ರಾಜು ಬಡಿಗೆ ಮತ್ತು ಕಲ್ಲಿನಿಂದ ತಂದೆ ಹನುಮಂತನ ತಲೆಗೆ ಹೊಡೆದು ಕೊಂದು ಪರಾರಿಯಾಗಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆಪಾತಕ ಪುತ್ರನ ಪತ್ತೆಗೆ ಮುಂದಾಗಿದ್ದಾರೆ ಎಂಬ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.