ದೇಶ

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುಟ್ಟರೆ 5000 ದಂಡ!

ವಿಲೇವಾರಿ ಮಾಡದ ಕಸ ಅಥವಾ ಅನುಪಯುಕ್ತ ತ್ಯಾಜ್ಯವಸ್ತುಗಳನ್ನು ನಮ್ಮನ್ನು ಯಾರು ಕೇಳುತ್ತಾರೆ, ಯಾರು ನೋಡುವವರಿಲ್ಲ ಎಂದು ಮೊಂಡುತನದಿಂದ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಸುಟ್ಟರೆ ಇನ್ನು ಮುಂದೆ 5000 ರುಪಾಯಿ ದಂಡ ತೆರಬೇಕಾಗುತ್ತದೆ...

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುಟ್ಟರೆ 5000 ದಂಡ!
ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುಟ್ಟರೆ 5000 ದಂಡ!
Published On :

ನವೆದೆಹಲಿ: ವಿಲೇವಾರಿ ಮಾಡದ ಕಸ ಅಥವಾ ಅನುಪಯುಕ್ತ ತ್ಯಾಜ್ಯವಸ್ತುಗಳನ್ನು ನಮ್ಮನ್ನು ಯಾರು ಕೇಳುತ್ತಾರೆ, ಯಾರು ನೋಡುವವರಿಲ್ಲ ಎಂದು ಮೊಂಡುತನದಿಂದ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಸುಟ್ಟರೆ ಇನ್ನು ಮುಂದೆ 5000 ರುಪಾಯಿ ದಂಡ ತೆರಬೇಕಾಗುತ್ತದೆ.
 ಸಾರ್ವಜನಿಕರಲ್ಲಿ ತ್ಯಾಜ್ಯವಸ್ತುಗಳ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಸಾರ್ವಜನಿಕ ಇಲಾಖೆಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್.ಜಿ.ಟಿ) ಈ ಆದೇಶವನ್ನು ಬುಧವಾರ ಹೊರಡಿಸಿದೆ.

ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವಸ್ತುಗಳನ್ನು ಸುಡುತ್ತಿರುವುದರಿಂದ ದೇಶದಾದ್ಯಂತ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದು, ಜನರಲ್ಲಿ ಶ್ವಾಸಕೋಶ ಸಂಬಂಧಿತ ರೋಗಗಳು ಹರಡುವುದನ್ನು ತಡೆಯುವ ಸಲುವಾಗಿ ಈ ಕ್ರಮವನ್ನು ನ್ಯಾಯಮಮಂಡಳಿ ಕೈ ಗೊಂಡಿದೆ.

ತ್ಯಾಜ್ಯ ಸುಡುವುದನ್ನು ಕಂಡ ಸಾರ್ವಜನಿಕರು ಈ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಅಥವಾ ಇಮೇಲ್, ಫೇಸ್ ಬುಕ್ ಅಥವಾ ವಾಟ್ಸ್ ಅಪ್ ಮೂಲಕ ದೂರು ದಾಖಲಿಸಿಬಹುದು. ಸ್ಥಳೀಯ ಪ್ರದೇಶಗಳಲ್ಲಿ ಆಗುವ ಇಂತಹ ಘಟನೆಗಳಿಗೆ ಸ್ಥಳೀಯ ನಾಗರಿಕ ಅಧಿಕಾರಿಗಳು ಹಾಗೂ ಪೊಲೀಸರು ಜವಾಬ್ದಾರಿಯುತರಾಗಿದ್ದು, ದೂರು ದಾಖಲಾದ 2 ದಿನಗಳ ಒಳಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.