ದೇಶ

ನಕಲಿ ಪ್ರಮಾಣ ಪತ್ರ: ಆಪ್ ಸಚಿವನ ರಾಜಿನಾಮೆಗೆ ಬಿಜೆಪಿ ಒತ್ತಾಯ

ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ಅವರು ಕಾನೂನು ಪದವಿ ಮಾಡಿರುವ ಕುರಿತಂತೆ ಸಲ್ಲಿಸಿರುವ ಪ್ರಮಾಣ ಪತ್ರ ನಕಲಿ ಎಂದು ಬಾಗಲ್ಪುರ ವಿಶ್ವವಿದ್ಯಾಲಯ ಹೇಳಿರುವ ಹಿನ್ನೆಲೆಯಲ್ಲಿ ಸಚಿವ...

ನಕಲಿ ಪ್ರಮಾಣ ಪತ್ರ: ಆಪ್ ಸಚಿವನ ರಾಜಿನಾಮೆಗೆ ಬಿಜೆಪಿ ಒತ್ತಾಯ
ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್
Published On :

ನವದೆಹಲಿ: ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ಅವರು ಕಾನೂನು ಪದವಿ ಮಾಡಿರುವ ಕುರಿತಂತೆ ಸಲ್ಲಿಸಿರುವ ಪ್ರಮಾಣ ಪತ್ರ ನಕಲಿ ಎಂದು ದೆಹಲಿ ಹೈಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಬಿಜೆಪಿ ಆಗ್ರಹಿಸಿದೆ.

ದೆಹಲಿ ಕಾನೂನು ಸಚಿವ ಜಿತೇಂದರ್ ಸಿಂಗ್ ಅವರು ಬಿಹಾರದ ತಿಲಕ್ ಮಂಝಿ ಬಾಗಲ್ಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಮಾಡಿದ್ದಾರೆಂದು ಸಲ್ಲಿಸಲಾಗಿರುವ ಪ್ರಮಾಣ ಪತ್ರ ನಕಲಿಯಾಗಿದೆ. ಪ್ರಮಾಣ ಪತ್ರದಲ್ಲಿರುವ ಸೀರಿಯಲ್ ಸಂಖ್ಯೆಯಲ್ಲಿ ಮತ್ತೊಬ್ಬರ ಹೆಸರಿದ್ದು ಇದೊಂದು ನಕಲಿ ಪ್ರಮಾಣ ಪತ್ರವಾಗಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು.

ಈ ಆರೋಪವನ್ನು ತಳ್ಳಿಹಾಕಿದ್ದ ಜಿತೇಂದರ್ ಸಿಂಗ್ ಅವರು ನಾನು ಇದೇ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, ನ್ಯಾಯಾಲಯ ಸ್ಪಷ್ಟೀಕರಣಕ್ಕಾಗಿ ವಿಶ್ವವಿದ್ಯಾಲಯವನ್ನು ಕೇಳಿದೆ. ವಿಶ್ವವಿದ್ಯಾಲಯವು ವಿವರಸಲ್ಲಿಸಿದ ನಂತರ ಎಲ್ಲಾ ಸತ್ಯಾಂಶಗಳು ಹೊರಬರಲಿದೆ ಎಂದು ಹೇಳಿದ್ದರು.

ಈ ಅರ್ಜಿಯನ್ನು ಸ್ವೀಕರಿಸಿದ ದೆಹಲಿ ನ್ಯಾಯಾಲಯವು ಮಾಹಿತಿ ನೀಡುವಂತೆ ತಿಲಕ್ ಮಂಝಿ ಬಾಗಲ್ಪುರ ವಿಶ್ವವಿದ್ಯಾಲಯವನ್ನು ಕೇಳಿತ್ತು. ನ್ಯಾಯಾಲಯದ ಆದೇಶದಂತೆ ಪ್ರಮಾಣ ಪತ್ರವನ್ನು ಪರಿಶೀಲಿಸಿದ ವಿಶ್ವವಿದ್ಯಾಲಯವು, ಇದೊಂದು ನಕಲಿ ಪ್ರಮಾಣ ಪತ್ರ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ವಿಶ್ವವಿದ್ಯಾಲಯದ ಮಾಹಿತಿಯನ್ನು ಪರಿಶೀಲಿಸಿದ ದೆಹಲಿ ನ್ಯಾಯಾಲಯವು ಇದೊಂದು ನಕಲಿ ದಾಖಲೆಯಾಗಿದ್ದು, ಜಿತೇಂದರ್ ಸಿಂಗ್ ಅವರು ಕಾನೂನು ಪದವಿ ಮಾಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಸೋಮವಾರ ಹೇಳಿತ್ತು.

ವಿಶ್ವವಿದ್ಯಾಲಯದ ಮಾಹಿತಿಯ ಹಿನ್ನಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಆಪ್ ಸಚಿವ ಜಿತೇಂದರ್ ಸಿಂಗ್ ತೋಮರ್ ಅವರ ರಾಜೀನಾಮೆಗೆ ಆಗ್ರಹಿಸಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಅಜಯ್ ಮಕೇನ್ ಅವರು, ಆರೋಪ ಸಾಬೀತಾದರೂ ಈ ವರೆಗೂ ಜಿತೇಂದರ್ ಸಿಂಗ್ ಅವರು ತಮ್ಮ ಸಚಿವ ಸ್ಥಾನದಲ್ಲಿ ಮುಂದುವರೆಯಲು ಹೇಗೆ ಸಾಧ್ಯ. ತಮ್ಮ ಪಕ್ಷದ ಸಚಿವರೊಬ್ಬರ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕೂಡಲೇ ಜಿತೇಂದರ್ ಸಿಂಗ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.    

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.