ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ: 10 ಸಾವು
ರಾಷ್ಟ್ರ ರಾಜಧಾನಿ ದೆಹಲಿಯ ಸುತ್ತಮುತ್ತ ಹಾಗೂ ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪನದಿಂದಾಗಿ ಭಾರತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ನವೆದಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸುತ್ತಮುತ್ತ ಹಾಗೂ ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪನದಿಂದಾಗಿ ಭಾರತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.
ದೆಹಲಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಪಾಟ್ನಾ, ಅಸ್ಸಾಂ, ಜಾರ್ಖಾಂಡ್, ಕೋಲ್ಕತಾ, ಲಖನೌ ಸೇರಿದಂತೆ ಉತ್ತರ ಹಾಗೂ ಪೂರ್ವ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ಭೂ ಕಂಪನದಿಂದಾಗಿ ಅಲ್ಲಿನ ಜನತೆ ಆತಂಕಗೊಂಡು ಮನೆ ಹಾಗೂ ಕಚೇರಿಗಳಿಂದ ಹೊರ ಬಂದಿದ್ದಾರೆ.
ನೇಪಾಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದ್ದು, ಸುಮಾರು 10 ರಿಂದ 20 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ.
ನೇಪಾಳದಲ್ಲೂ ಪ್ರಬಲ ಭೂಕಂಪನ
ಭೂಕಂಪನದ ಕೇಂದ್ರ ಬಿಂದು ಇದೀಗ ನೇಪಾಳದ ಕಠ್ಮಂಡುವಿನಲ್ಲಿ ಕಂಡು ಬಂದಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.5 ರಷ್ಟು ದಾಖಲಾಗಿದೆ. ಭೂಕಂಪನದಿಂದಾಗಿ ಕಠ್ಮಂಡುವಿನ ಸುತ್ತಮುತ್ತಲಿನ ಪ್ರದೇಶವೆಲ್ಲ ಧೂಳುಮಯವಾಗಿದ್ದು, ಅಲ್ಲಿನ ಕಟ್ಟಡಗಳು ಉರುಳಿವೆ ಎಂದು ತಿಳಿದುಬಂದಿದೆ. ಆದರೆ ಈವರೆಗೂ ಪ್ರಾಣಾಪಾಯವಾಗಿರುವ ಕುರಿತಂತೆ ವರದಿಯಾಗಿಲ್ಲ.
ದೆಹಲಿ, ಕೋಲ್ಕತಾ ಮೆಟ್ರೋ ಸಂಚಾರ ಸ್ಥಗಿತ
ಉತ್ತರ ಹಾಗೂ ಪೂರ್ವ ಭಾರತದ ಹಲವೆಡೆ ಭೂಮಿ ಕಂಪಿಸಿರುವ ಹಿನ್ನೆಲೆಯಲ್ಲಿ ದೆಹಲಿ, ಕೋಲ್ಕತಾ ಹಾಗೂ ಇನ್ನಿತರೆ ಪ್ರದೇಶದ ಮೆಟ್ರೋ ಸಂಚಾರ ಕಡಿತಗೊಂಡಿದ್ದು, ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ ಎಂದು ಹೇಳಲಾಗುತ್ತಿದೆ.
ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿಯಿಂದ ಸಹಾಯವಾಣಿ ಆರಂಭಿಸಿದ್ದು, ಸಹಾಯಕ್ಕಾಗಿ 00977-9851135141, 00977-9851107021ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


