ದೇಶ

ಕೇದಾರನಾಥನ ಬಳಿ ಏನನ್ನೂ ಬೇಡಲಿಲ್ಲ: ರಾಹುಲ್ ಗಾಂಧಿ

ಕೇದಾರನಾಥೇಶ್ವರನ ಬಳಿ ತನ್ನ ರಾಜಕೀಯ ಜೀವನಕ್ಕಾಗಿ ಏನನ್ನೂ ಬೇಡಲಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕೇದಾರನಾಥನ ಬಳಿ ಏನನ್ನೂ ಬೇಡಲಿಲ್ಲ: ರಾಹುಲ್ ಗಾಂಧಿ
ಯಾತ್ರೆಗೆ ತೆರಳುತ್ತಿರುವ ರಾಹುಲ್ ಗಾಂಧಿ
Published On :

ಡೆಹರಾಡೂನ್: ಕೇದಾರನಾಥೇಶ್ವರನ ಬಳಿ ತನ್ನ ರಾಜಕೀಯ ಜೀವನಕ್ಕಾಗಿ ಏನನ್ನೂ ಬೇಡಲಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

57 ದಿನಗಳ ವಿದೇಶ ಪ್ರವಾಸ ಮುಗಿಸಿ ವಾಪಸ್ ಬಂದಿರುವ ಕಾಂಗ್ರೆಸ್ ಯುವರಾಜ ರಾಹುಲ್ ನಿನ್ನೆ ಹಿಮಾಲಯ ತಪ್ಪಲಿನಲ್ಲಿರುವ ಚಾರ್ ಧಾಮ್ ಗಳಲ್ಲಿ ಒಂದಾಗಿರುವ ಕೇದಾರನಾಥ ದೇವಾಲಯಕ್ಕೆ ತೆರಳಿದ್ದರು. ರಾತ್ರಿಯಿಡಿ ಗೌರಿಕುಂಡ್ ನಲ್ಲಿದ್ದ ರಾಹುಲ್, ಇಂದು ಬೆಳಗ್ಗೆ  8.30ಕ್ಕೆ ಪುರಾಣ ಪ್ರಸಿದ್ಧ ದೇಗುಲಕ್ಕೆ ತೆರಳಿ ಕೇದಾರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು ದೇವರ ಬಳಿ ತನಗಾಗಿ ಏನನ್ನೂ ಬೇಡಲಿಲ್ಲ. 2013 ರಲ್ಲಿ ಮೇಘಸ್ಫೋಟದಿಂದ ಉಂಟಾದ ದುರಂತದಲ್ಲಿ ಸಾವನ್ನಪ್ಪಿದವರಿಗಾಗಿ  ದೇವರಲ್ಲಿ ಪ್ರಾರ್ಥಿಸಿದ್ದಾಗಿ  ತಿಳಿಸಿದರು. ಕೇದಾರನಾಥೇಶ್ವರನ ದರ್ಶನಕ್ಕಾಗಿ ರಾಹುಲ್ ಕಾಂಗ್ರೆಸ್ ಹಿರಿಯ ನಾಯಕರೊಂದಿಗೆ 16 ಕೀಮೀ ಪಾದಯಾತ್ರೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.