ದೇಶ

ಮೋದಿಯದ್ದು ಸೂಟು- ಬೂಟುಧಾರಿ ಸರ್ಕಾರ : ರಾಹುಲ್ ಗಾಂಧಿ

ಬಿಜೆಪಿ ನೇತೃತ್ವದ ಆಡಳಿತಾರೂಢ ಮೋದಿಯವರ ಅಚ್ಚೇ ದಿನ್ ಸರ್ಕಾರ ವಿಫಲವಾಗಿದೆ. ರೈತರು ದೇಶದ ಬೆನ್ನೆಲುಬು. ರೈತರಿಂದ ದೇಶದಲ್ಲಿ ...

ಮೋದಿಯದ್ದು  ಸೂಟು- ಬೂಟುಧಾರಿ ಸರ್ಕಾರ : ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ನವದೆಹಲಿ : ಬಿಜೆಪಿ ನೇತೃತ್ವದ ಆಡಳಿತಾರೂಢ ಮೋದಿಯವರ ಅಚ್ಚೇ ದಿನ್ ಸರ್ಕಾರ ವಿಫಲವಾಗಿದೆ. ರೈತರು ದೇಶದ ಬೆನ್ನೆಲುಬು. ರೈತರಿಂದ ದೇಶದಲ್ಲಿ ಹಸಿರು ಕ್ರಾಂತಿ ನಡೆದಿದೆ. ಆದರೆ ಕೇಂದ್ರ ಸರ್ಕಾರ ರೈತರು ಮತ್ತು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯದ್ದು  ಸೂಟು- ಬೂಟುಧಾರಿಗಳ ಶ್ರೀಮಂತರ ಪರವಾಗಿರುವ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದ ಚರ್ಚೆ ವೇಳೆ ರಾಹುಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ದೇಶದ ಅಭಿವೃದ್ಧಿ ರೈತರ ಅಭಿವೃದ್ಧಿ  ಮೇಲೆ ನಿಂತಿದೆ. ಆದರೆ ಒಳ್ಳೆ ದಿನದ ಸರ್ಕಾರ ವಿಫಲವಾಗಿದೆ. ರೈತರ ಸ್ಥಿತಿ ಹೇಗಿದೆ ಎಂಬುದನ್ನು ನೀವು ಕಂಡರಿಯಬೇಕು.  ಕೇಂದ್ರ ಸಚಿವ ನಿತಿನ್ ಗಡ್ಕರಿ ಸರಿಯಾಗಿಯೇ ಹೇಳಿದ್ದಾರೆ, ರೈತರು ಯಾರ ಮೇಲೂ ನಂಬಿಕೆ ಇಡಬೇಡಿ ಎಂದಿದ್ದರು. ಹಾಗಾಗಿ ರೈತರು ಕೇಂದ್ರ ಸರ್ಕಾರದ ಮೇಲೂ ನಂಬಿಕೆ ಇಡಬಾರದು ಎಂದು ರಾಹುಲ್ ತಿರುಗೇಟು ನೀಡಿದ್ದಾರೆ.

ರೈತರ ಬೆಳೆ ಹಾನಿಗೆ ಸಂಬಂಧಿಸಿದಂತೆ ತಜ್ಞರು 3 ವರದಿಗಳನ್ನು ನೀಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅದನ್ನು ಸುಳ್ಳು ಎನ್ನುತ್ತಿದ್ದಾರೆ. ಆದರೆ ಕೃಷಿ ಸಚಿವರು ಬೇರೆ ಮಾಹಿತಿ ನೀಡುತ್ತಿದ್ದಾರೆ.

ಕೇಂದ್ರ ಸರ್ಕಾರ ಬಂಡವಾಳ ಹೂಡಿಕೆ ಹೆಸರಿನಲ್ಲಿ ಉದ್ಯಮ ನಡೆಸುತ್ತಿದೆ. ಇದು ಕೈಗಾರಿಕೋದ್ಯಮಿಗಳ, ಶ್ರೀಮಂತರ ಪರವಾದ ಸರ್ಕಾರವಾಗಿದೆ.ಕಾರ್ಪೋರೇಟ್ ವಲಯಕ್ಕಾಗಿ ಕೇಂದ್ರ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ಸರ್ಕಾರಕ್ಕೆ ರೈತರ ಮೇಲೆ ಯಾವುದೇ ಕಾಳಜಿ, ಅನುಕಂಪ ಇಲ್ಲ ಎಂದು ರಾಹುಲ್ ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.