ಲಿಬಿಯಾದಲ್ಲಿ ಮತ್ತೊಂದು ಹಡಗು ದುರಂತ: 700 ವಲಸಿಗರು ಜಲಸಮಾಧಿ
728ಕ್ಕೂ ಹೆಚ್ಚು ಲಿಬಿಯಾ ಅಕ್ರಮ ವಲಸಿಗರನ್ನು ಹೊತ್ತ ಬೃಹತ್ ಹಡಗೊಂದು ಮಧ್ಯ ಮೆಡಿಟೇರಿಯನ್ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದು...

ರೋಮ್: 728ಕ್ಕೂ ಹೆಚ್ಚು ಲಿಬಿಯಾ ಅಕ್ರಮ ವಲಸಿಗರನ್ನು ಹೊತ್ತ ಬೃಹತ್ ಹಡಗೊಂದು ಮಧ್ಯ ಮೆಡಿಟೇರಿಯನ್ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದು, ಪರಿಣಾಮ ಹಡಗಿನಲ್ಲಿದ್ದವರ ಪೈಕಿ 700 ಮಂದಿ ಜಲಸಮಾಧಿಯಾಗಿರುವ ಬಗ್ಗೆ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿಮಾಡಿವೆ.
ಕಳೆದ ರಾತ್ರಿ ಲಿಬಿಯಾ ಕರಾವಳಿಯಿಂದ 120 ಮೈಲಿ ದೂರದ ಲ್ಯಾಂಪೆಡುಸಾ ಎಂಬಲ್ಲಿ ಹಡಗು ದುರಂತಕ್ಕೀಡಾಗಿದ್ದು, 700 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದೇ ವೇಳೆ 28 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ವಾರವಷ್ಟೇ ಲಿಬಿಯಾ ಕರಾವಳಿಯಲ್ಲಿ ಅಕ್ರಮ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮುಳುಗಿ 400 ಮಂದಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘೋರ ದುರಂತ ಸಂಭವಿಸಿದೆ.
ಆಂತರಿಕ ಸಂಘರ್ಷ, ಬಡತನದಿಂದ ಬೆಂದು ಹೋಗಿರುವ ಲಿಬಿಯಾ ಜನತೆ, ಯುರೋಪ್ ರಾಷ್ಟ್ರಗಳಿಗೆ ವಲಸೆ ಹೋಗುವುದು ಸಾಮಾನ್ಯ. ಮೆಡಿಟರೇನಿಯನ್ ವಲಯದಲ್ಲಿ ಇದೀಗ ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ, ಅಕ್ರಮ ವಲಸಿಗರು, ಇದೇ ಸಂದರ್ಭವನ್ನು ಅಕ್ರಮ ಪ್ರಯಾಣಕ್ಕೆ ಬಳಸಿಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


