ನಟಿ ಸುಕನ್ಯಾಗೆ 10 ಲಕ್ಷ ಪರಿಹಾರ ನೀಡುವಂತೆ ಸನ್ ಟಿವಿಗೆ ಕೋರ್ಟ್ ಸೂಚನೆ
18 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿ ಸುಕನ್ಯಾ ಅವರಿಗೆ ಸನ್ ಟೀವಿ 10 ಲಕ್ಷ...

ಚೆನ್ನೈ: 18 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿ ಸುಕನ್ಯಾ ಅವರಿಗೆ ಸನ್ ಟೀವಿ 10 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯದ ಆದೇಶಿಸಿದೆ.
ಕಾಡುಗಳ್ಳ, ದಂತ ಚೋರ ವೀರಪ್ಪನ್ ಬದುಕಿದ್ದಾಗ ಬಹು ಭಾಷಾ ನಟಿ ಸುಕನ್ಯಾ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿದ್ದನು. ಇದನ್ನು ಸನ್ ಟಿವಿ ಪ್ರಸಾರ ಮಾಡಿತ್ತು.
'ನಕ್ಕೀರನ್' ಪತ್ರಿಕೆಯ ಗೋಪಾಲ್ ಗೆ ವೀರಪ್ಪನ್ ನೀಡಿದ್ದ ಸಂದರ್ಶನದಲ್ಲಿ ನಟಿ ಸುಕನ್ಯಾ ಅವರ ಕುರಿತಾಗಿ ಅವಹೇಳನಾಕಾರಿಯಾಗಿ ಮಾತನಾಡಿದ್ದನು. ಸನ್ ಟಿವಿ ಮತ್ತು ಗೋಪಾಲ್ ನಡುವೆ ಒಪ್ಪಂದ ನಡೆದಿತ್ತು. ಅದರ ಪ್ರಕಾರ ಈ ವಿಡಿಯೋವನ್ನು ಪ್ರಸಾರ ಮಾಡುವ ಸಲುವಾಗಿ ಗೋಪಾಲ್ ಸನ್ ಟಿವಿಗೆ ನೀಡಿದ್ದರು. ಇದನ್ನು ಸನ್ ಟಿವಿ 1996 ರ ಏಪ್ರಿಲ್ 7 ರಂದು ಪ್ರಸಾರ ಮಾಡಿತ್ತು.
ವೀರಪ್ಪನ್ ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವುದನ್ನು ಪ್ರಸಾರ ಮಾಡಿ ನನ್ನನ್ನು ಅಪಮಾನಿಸಲಾಗಿದೆ ಎಂದು ನಟಿ ಸುಕನ್ಯಾ ಸನ್ ಟಿವಿ, ನಕ್ಕೀರನ್ ಗೋಪಾಲ್ ಹಾಗೂ ವೀರಪ್ಪನ್ ವಿರುದ್ದ ಮದ್ರಾಸ್ ಹೈಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ, 10,00,500 ರೂ. ಪರಿಹಾರ ಕೊಡಿಸಿಕೊಡುವಂತೆ ಮನವಿ ಮಾಡಿದ್ದರು.
ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾಯಿಸಿದ್ದು, ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬರೋಬ್ಬರಿ 18 ವರ್ಷಗಳ ಬಳಿಕ ನಟಿ ಸುಕನ್ಯಾ ಅವರಿಗೆ 10,00,500 ರೂ. ಪರಿಹಾರ ನೀಡುವಂತೆ ಸನ್ ಟಿವಿ ಆಡಳಿತ ವರ್ಗಕ್ಕೆ ಆದೇಶಿಸಿದೆ. ಅಲ್ಲದೇ, ಈ ಪ್ರಕರಣದಿಂದ ನಕ್ಕೀರನ್ ಗೋಪಾಲ್ ಅವರನ್ನು ಕೈ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


