ಹಮಾರಾ ಬಜಾಜ್ ಮತ್ತೆ ರಸ್ತೆಗೆ?
ಹಮಾರಾ ಬಜಾಜ್ ಜಾಹೀರಾತು ಯಾರಿಂದಾದರೂ ಮರೆಯಲು ಸಾಧ್ಯವೇ?

ನವದೆಹಲಿ: ಹಮಾರಾ ಬಜಾಜ್ ಜಾಹೀರಾತು ಯಾರಿಂದಾದರೂ ಮರೆಯಲು ಸಾಧ್ಯವೇ?
80-90ರ ದಶಕದಲ್ಲಿ ಮನೆಗೊಂದರಂತೆ ಕಾಣಿಸಿಕೊಳ್ಳುತ್ತಿದ್ದ ಬಜಾಜ್ ಸ್ಕೂಟರುಗಳು ಆಟೋಮೊಬೈಲ್ ಜಗತ್ತಿನಲ್ಲಿ ನಡೆದ ಫೋರ್ ಸ್ಟ್ರೋಕ್ ಎಂಜಿನ್ ವಾಹನಗಳ ಅಬ್ಬರಕ್ಕೆ ತತ್ತರಿಸಿ ನೇಪಥ್ಯಕ್ಕೆ ಸರಿದು ಹೋಗಿದ್ದವು. ಆದರೆ ಆ ದಿನಗಳು ಮತ್ತೆ ಮರುಕಳಿಸುವ ಸೂಚನೆ ಕಂಡುಬರುತ್ತಿವೆ.
ವೆಸ್ಪಾ ಸ್ಕೂಟರ್ ಮಾರುಕಟ್ಟೆಗೆ ಬಂದು ಯಶಸ್ವಿಯಾದ ಬೆನ್ನಲ್ಲಿ ಈಗ ಬಜಾಬ್ ಚೇತಕ್ ಹೊಸರೂಪದಲ್ಲಿ ರಸ್ತೆಗಿಳಿಯುವ ಸಾಧ್ಯತೆ ಕಾಣಿಸುತ್ತಿದೆ. ಬಜಾಜ್ ಆಟೋಮೊಬೈಲ್ಸ್ ಕಂಪನಿ ತನ್ನ ಅತ್ಯಂತ ಜನಪ್ರಿಯ ಬ್ರಾಂಡ್ ಚೇತಕ್ ಹೆಸರನ್ನು ಮರು ನೋಂದಣಿ ಮಾಡಿಕೊಂಡಿರುವುದು ಆ ಗತವೈಭವವನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.
ಆದರೆ ಕಂಪನಿ ಚೇತಕ್ ಸ್ಕೂಟರ್‍ಗಳನ್ನು ಮತ್ತೆ ಉತ್ಪಾದಿಸುವ ಬಗ್ಗೆ ಖಚಿತ ಉತ್ತರ ನೀಡಿಲ್ಲ. ಸದ್ಯ ಚೇತಕ್ ಹೆಸರನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಮರು ನೋಂದಣಿ ಮಾಡಿರುವುದಾಗಿ ಹೇಳಿರುವ ಬಜಾಜ್, ಮುಂದಿನ ನಡೆ ಬಗ್ಗೆ ಕಾದು ನೋಡಿ ಎಂದಷ್ಟೇ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


