ಸಾಹಿತಿ ಗಂಥರ್ ಗ್ರಾಸ್ ನಿಧನ
ನೊಬೆಲ್ ಪ್ರಶಸ್ತಿ ವಿಜೇತ, ನಾಝಿಗಳ ದೌರ್ಜನ್ಯದಿಂದ ಕಂಗೆಟ್ಟಿದ್ದ ಜನರ ಧ್ವನಿಯಾಗಿದ್ದ ಜರ್ಮನಿಯ ಲೇಖಕ ಗಂಥರ್ ಗ್ರಾಸ್(87) ಸೋಮವಾರ ನಿಧನ ರಾಗಿದ್ದಾರೆ...

ಬರ್ಲಿನ್: ನೊಬೆಲ್ ಪ್ರಶಸ್ತಿ ವಿಜೇತ, ನಾಝಿಗಳ ದೌರ್ಜನ್ಯದಿಂದ ಕಂಗೆಟ್ಟಿದ್ದ ಜನರ ಧ್ವನಿಯಾಗಿದ್ದ ಜರ್ಮನಿಯ ಲೇಖಕ ಗಂಥರ್ ಗ್ರಾಸ್(87) ಸೋಮವಾರ ನಿಧನ ರಾಗಿದ್ದಾರೆ.
ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಗಂಥರ್ ಗ್ರಾಸ್ ಅವರು ಲ್ಯುಬೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಉಸಿರಾಟಕ್ಕೆ ತೀವ್ರವಾಗಿ ತೊಂದರೆಯುಂಟಾದ ಕಾರಣ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗಂಥರ್ ಗ್ರಾಸ್ ಅವರು ತಮ್ಮ 17 ವಯಸ್ಸಿನಲ್ಲಿಯೇ ಎರಡನೇ ಮಹಾಯುದ್ಧದ ಭೀಕರ ದೃಶ್ಯಗಳನ್ನು ನೋಡಿದ್ದರು. ಅಂದು ಗಂಥರ್ ಗ್ರಾಸ್ ಹಿಟ್ಲರ್ ಅವರ ಯುವ ಪಡೆಯ ಸದಸ್ಯರಾಗಿದ್ದರು. ತದನಂತರ ನಾಡಿ ವಿಶೇಷ ಪಡೆಗಳ ಘಟಕ ಸೇರಿದ್ದರು. 1999ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಗಂಥರ್ ಅವರು, 1959ರಲ್ಲಿ ಬರೆದ `ದಿ ಟಿನ್ ಟ್ರಮ್' ಕೃತಿ ಅವರಿಗೆ ಸಾಕಷ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಕ್ಯಾಟ್ ಆ್ಯಂಡ್ ಮೌಸ್, ಡಾಗ್ ಇಯರ್ಸ್ ಅವರ ಇತರ ಪ್ರಸಿದ್ಧ ಕೃತಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


