ಭಾರತದಲ್ಲಿ ಹೂಡಿಕೆ ಮಾಡಿ, ಜರ್ಮನ್ ವ್ಯಾಪಾರಿಗಳಿಗೆ ಮೋದಿ ಆಹ್ವಾನ
ಮೇಕ್ ಇನ್ ಇಂಡಿಯಾ ಗೆ ಉತ್ತೇಜನ ನೀಡಲು ಕಸರತ್ತು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜರ್ಮನಿಗರೇ ಭಾರತದಲ್ಲಿ ಹೂಡಿಕೆ ಮಾಡಿ...

ಹ್ಯಾನೋವರ್: ಮೇಕ್ ಇನ್ ಇಂಡಿಯಾ ಗೆ ಉತ್ತೇಜನ ನೀಡಲು ಕಸರತ್ತು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜರ್ಮನಿಗರೇ ಭಾರತದಲ್ಲಿ ಹೂಡಿಕೆ ಮಾಡಿ. ಹೂಡಿಕೆ ಮಾಡಲು ಇದು ಪ್ರಶಸ್ತ ಸಮಯ ಎಂದು ಸೋಮವಾರ ಹೇಳಿದ್ದಾರೆ.
ಜರ್ಮನ್ ಪ್ರವಾಸದಲ್ಲಿರುವ ಮೋದಿ ಅವರು, ಹ್ಯಾನೋವರ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ವ್ಯಾಪಾರಿ ಇಂಡೋ-ಜರ್ಮನ್ ಮೇಳದಲ್ಲಿ ಭಾಗವಹಿಸಿದ್ದರು. ಈ ವೇಳೆ ಇಂಡಿಯಾ ಪೆವಿಲಿಯನ್ ಉದ್ಘಾಟಿಸಿ ಮೇಳವನ್ನು ಉದ್ದೇಶಿಸಿ ಮಾತನಾಡಿದ ಅವರು. ಇಡೀ ಜಗತ್ತಿನ ಚಿತ್ತ ಈಗ ಭಾರತದತ್ತ ನೆಟ್ಟಿದೆ. ಹೀಗಾಗಿ ಜರ್ಮನಿಗರೇ ಭಾರತದಲ್ಲಿ ಹೂಡಿಕೆ ಮಾಡಿ. ಹೂಡಿಕೆ ಮಾಡಲು ಪ್ರಶಸ್ತ ವಾತಾವರಣ ಇದೆ ಎಂದರು. ಅಲ್ಲದೆ ನಮ್ಮನ್ನು ಈ ಮೇಳೆದಲ್ಲಿ ಜೊತೆಗಾರರನ್ನಾಗಿ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಅತಿದೊಡ್ಡ ವ್ಯಾಪಾರಿ ಮೇಳದಲ್ಲಿ ಸುಮಾರು 400ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಭಾಗಿಯಾಗಿವೆ. ಅಲ್ಲದೆ 120ಕ್ಕೂ ಹೆಚ್ಚು ಭಾರತದ ಉದ್ದಿಮೆದಾರರು ಭಾಗವಹಿಸಿದ್ದಾರೆ.
ಪ್ರಧಾನಿ ಹೇಳಿದ್ದೇನು?
* ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಆದ್ಯತಾ ವಲಯಗಳನ್ನು ಗುರುತಿಸಿ ಅದರಂತೆ ಕೆಲಸ ಮಾಡಲು ಮುಂದಾಗಿದ್ದೇವೆ.
* ದೇಶದ ಹಣಕಾಸು ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಜರ್ಮನಿ ಪಾಲುದಾರನಾಗಬೇಕು. ಅದಕ್ಕಾಗಿ ಇಲ್ಲಿನ ತಾಂತ್ರಿಕತೆ ಮತ್ತು ಕೌಶಲ್ಯ ನಮ್ಮಲ್ಲಿಗೆ ಬರಬೇಕು.
* ಜಾಗತಿಕ ಅರ್ಥವ್ಯವಸ್ಥೆಗೆ ಅನುಗುಣವಾಗುವಂತೆ ನಮ್ಮ ದೇಶದ ಯುವಕರಿಗೆ ವಿದ್ಯಾಭ್ಯಾಸದ ಜತೆಗೆ ಕೌಶಲ್ಯ ತರಬೇತಿಯನ್ನೂ ನೀಡಬೇಕು. ಅದಕ್ಕಾಗಿ ಬೇಕಾಗಿರುವ ವ್ಯವಸ್ಥೆಗಳನ್ನು ಹೊಂದಬೇಕಾಗಿದೆ.
* ಸರಕು ಮತ್ತು ಸೇವಾ ತೆರಿಗೆ ಜಾರಿ ಹಲವು ವರ್ಷಗಳ ಹಿಂದೆಯೇ ಜಾರಿಯಾಗಬೇಕಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಅದರ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಹಣಕಾಸು ವರ್ಷದಿಂದ ಅದು ಅನುಷ್ಠಾನಕ್ಕೆ ಬರಲಿದೆ.
* ಪ್ರಬಲ ಮತ್ತು ಸದೃಢ ಅರ್ಥ ವ್ಯವಸ್ಥೆಯನ್ನು ಸೃಷ್ಟಿಸಲು ನಿರ್ಧಾರ ಕೈಗೊಂಡಿದ್ದೇವೆ. ಈ ಮೂಲಕ ದೇಶಿಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ವಿಶ್ವಾಸದಾಯಕ ಬಂಡವಾಳ ಹೂಡಿಕೆ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದೇವೆ.
* ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕ್ಲಿಷ್ಟ ನಿಯಮಗಳನ್ನು ಮತ್ತಷ್ಟು ಸರಳಗೊಳಿಸುತ್ತಿದ್ದೇವೆ.
* ದೇಶದ ಅರ್ಥ ವ್ಯವಸ್ಥೆ ಸುಧಾರಿಸಲು ಶುದಟಛಿ ಇಂಧನ ಅಗತ್ಯವಿದೆ. ಅದುವೇ ನಮ್ಮ ಸರ್ಕಾರದ ಆದ್ಯತೆಯಾಗಿದೆ.
* ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಅನುಮೋದನೆ ನೀಡಿ ನಂಬುಗೆಯ ವಾತಾವಾರಣ ಸೃಜಿಸಲು ಪಣ ತೊಟ್ಟಿದ್ದೇವೆ.
* ಭಾರತ ವಿಶ್ವ ಆರ್ಥಿಕ ಭೂಪಟದಲ್ಲಿ ಸದೃಢವಾದ ಸ್ಥಾನ ಪಡಕೊಳ್ಳಬೇಕೆಂದು ಇಚ್ಛಿಸುತ್ತಿದೆ. ಅಭಿವೃದ್ಧಿಯ ಪಥದಲ್ಲಿ ಅಗ್ರಜನಾಗಿ ಶಾಂತಿ ಮತ್ತು ಸ್ಥಿರತೆಯ ಪ್ರಮುಖ ಸೂತ್ರಧಾರನಾಗಲು ಬಯಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


