ರಾಜ್ಯಪಾಲರ ಪ್ರವಾಸಕ್ಕೆ ಕೇಂದ್ರ ಮೂಗುದಾರ
ರಾಜ್ಯಪಾಲರ ಹುದ್ದೆಯನ್ನು ಲಘುವಾಗಿ ತೆಗೆದುಕೊಳ್ಳುವ ರಾಜ್ಯಪಾಲರಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಧಿಕೃತ ಭೇಟಿ ಹೆಸರಿನಲ್ಲಿ ರಾಜ್ಯದ ಹೊರಗೆ ಖಾಸಗಿ ಪ್ರವಾಸ ಕೈಗೊಳ್ಳುವ, ಸರ್ಕಾರದ ಹಣವನ್ನು ಸುಖಾಸುಮ್ಮನೆ...

ನವದೆಹಲಿ: ರಾಜ್ಯಪಾಲರ ಹುದ್ದೆಯನ್ನು ಲಘುವಾಗಿ ತೆಗೆದುಕೊಳ್ಳುವ ರಾಜ್ಯಪಾಲರಿಗೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಧಿಕೃತ ಭೇಟಿ ಹೆಸರಿನಲ್ಲಿ ರಾಜ್ಯದ ಹೊರಗೆ ಖಾಸಗಿ ಪ್ರವಾಸ ಕೈಗೊಳ್ಳುವ, ಸರ್ಕಾರದ ಹಣವನ್ನು ಸುಖಾಸುಮ್ಮನೆ ಪೋಲು ಮಾಡುವ ರಾಜ್ಯಪಾಲರ ಆಟಕ್ಕೆ ಕಡಿವಾಣ ಹಾಕಲು ಹೊಸ ನಿಯಮಾವಳಿ ಸಿದ್ಧಪಡಿಸಿದೆ.
ಅದರಂತೆ ಇನ್ನು ಮುಂದೆ ರಾಜ್ಯಪಾಲರು ರಾಜ್ಯದಿಂದ ಹೊರಗೆ ಖಾಸಗಿ ಅಥವಾ ಅಧಿಕೃತ ಪ್ರವಾಸ ಮಾಡುವ ಮೊದಲು ರಾಷ್ಟ್ರಪತಿಗಳ ಅನುಮತಿ ಪಡೆಯುವುದು, ಪ್ರತಿ ವರ್ಷ ಕನಿಷ್ಠ 292 ದಿನವನ್ನಾದರೂ ರಾಜ್ಯದಲ್ಲೇ ಕಳೆಯುವುದು ಕಡ್ಡಾಯ.
ಕಮಲಾ ಬೇನಿ(ಗುಜರಾತ್‍ನ ರಾಜ್ಯಪಾಲರಾಗಿದ್ದವರು) ಯಂಥ ರಾಜ್ಯಪಾಲರು ತಮ್ಮ ಅಧಿಕಾರಾವಧಿಯ ಬಹುತೇಕ ಅವಧಿಯನ್ನು ರಾಜ್ಯದ ಹೊರಗೆ ಕಳೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ಕೇಂದ್ರ ಗೃಹ ಸಚಿವಾಲಯ ಹೊಸ ನಿಯಮಾವಳಿಗಳಿರುವ ಸುತ್ತೋಲೆಯೊಂದನ್ನು ಎಲ್ಲ ರಾಜ್ಯಭವನಕ್ಕೆ ಕಳುಹಿಸಿಕೊಟ್ಟಿದೆ.
ಏನೇನಿದೆ ಸುತ್ತೋಲೆಯಲ್ಲಿ
- ರಾಷ್ಟ್ರಪತಿಗಳ ಪೂರ್ವಾನ್ವತಿ ಇಲ್ಲದೆ ರಾಜ್ಯದ ಹೊರಗೆ ಭೇಟಿ ನೀಡುವಂತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳ ಕಾರ್ಯಾಲಯದ ಅನುಮತಿ ಪಡೆಯುವುದು ಕಡ್ಡಾಯ. ಕೊನೆಯ ಕ್ಷಣದ ಪ್ರವಾಸವಾಗಿದ್ದರೆ ಆ ಕುರಿತು ರಾಜ್ಯಪಾಲರು ಸಕಾರಣ ನೀಡಬೇಕು.
- ಪ್ರವಾಸದ ಒಂದು ಅಥವಾ ಆರು ವಾರಗಳ ಮೊದಲು ರಾಜ್ಯದ ಹೊರಗಿನ ಪ್ರವಾಸಕ್ಕೆ ಅನುಮತಿ ಕೋರಬೇಕು. ವಿದೇಶಿ ಪ್ರವಾಸವಾಗಿದ್ದರೆ ಆರು ವಾರಗಳ ಮೊದಲು ಅನುಮತಿ ಪಡೆಯುವುದು ಕಡ್ಡಾಯ. ಅದೇ ರೀತಿ ರಾಷ್ಟ್ರಪತಿಗಳ ಭವನಸಕ್ಕೆ ಕಳುಹಿಸುವ ಮನವಿಯ ಒಂದು ಪ್ರತಿಯನ್ನು ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೂ ಕಳುಹಿಸಿಕೊಡಬೇಕು.
- ಪ್ರವಾಸದ ಅವಧಿ ಆಯಾ ಕ್ಯಾಲೆಂಡರ್ ವರ್ಷದ ಶೇ.20ರಷ್ಟನ್ನು ದಾಟಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


