ದೇಶ

ಸರ್ಕಾರಿ ನೌಕರರೇ ತಪ್ಪದೇ ಆಸ್ತಿ ಲೆಕ್ಕ ಸಲ್ಲಿಸಿ

ಸರ್ಕಾರಿ ನೌಕರರೆಲ್ಲರೂ ತಪ್ಪದೇ ತಮ್ಮ ಆಸ್ತಿ ಲೆಕ್ಕ ಸಲ್ಲಿಸುವಂತೆ ಕೇಂದ್ರ ಆದೇಶಿದಿದೆ...

ಸರ್ಕಾರಿ ನೌಕರರೇ ತಪ್ಪದೇ ಆಸ್ತಿ ಲೆಕ್ಕ ಸಲ್ಲಿಸಿ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಸರ್ಕಾರಿ ನೌಕರರೆಲ್ಲರೂ ತಪ್ಪದೇ ತಮ್ಮ ಆಸ್ತಿ ಲೆಕ್ಕ ಸಲ್ಲಿಸುವಂತೆ ಕೇಂದ್ರ ಆದೇಶಿದಿದೆ.

ಲೊಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯನ್ವಯ 2014ರ ಸಾಲಿನ ಆಸ್ತಿ ವಿವರವನ್ನು ಇದೇ ಏ.30ರರೊಳಗಾಗಿ ಸಲ್ಲಿಸಬೇಕು. ಜೊತೆಗೆ, 2015ರ ಸಾಲಿನ ಆಸ್ತಿ ವಿವರವನ್ನು ಜುಲೈ 31ರರೊಳಗೆ ಸಲ್ಲಿಸಬೇಕೆಂದು ಕೇಂದ್ರ ಹೇಳಿದೆ.

ಈ ಕಾಯ್ದೆಯಡಿ ತಮ್ಮ ಸ್ಥಿರ-ಚರ ಆಸ್ತಿಗಳ ವಿವರವೂ ಸಲ್ಲಿಸ ಬೇಕು. ಇನ್ನು ನೌಕರರ ಆಸ್ತಿ ವಿವರ ಸರಿಯಾದ ರೀತಿಯಲ್ಲಿದೆಯೇ ಎಂದು ಎಲ್ಲ ಸಚಿವಾಲಯಗಳೂ ಗಮನಹರಿಸಬೇಕು ಎಂದಿದೆ. 2014ರ ಆಸ್ತಿ ವಿವರಗಳನ್ನು ಸೆ.15ರ ಗಡುವು ವಿಧಿಸಲಾಗಿತ್ತು.

ಆದರೆ ದಿನಾಂಕವನ್ನು ಡಿಸೆಂಬರ್ ಗೆ ಮುಂದೂಡಿತ್ತು. ಈಗ ಏ.30 ಕಟ್ಟ ಕಡೆಯ ದಿನ ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ತಿಳಿಸಿದೆ.

www.cscms.nic.in ಎಂಬ ವೆಬ್ಸೈಟ್ ಮೂಲಕ ಆಸ್ತಿ ವಿವರ ಸಲ್ಲಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.