ಭಾರತದ ಆರ್ಥಿಕ ಅಭಿವೃದ್ಧಿಗೆ ಸಣ್ಣ ಉದ್ಯಮವೇ ಬೆನ್ನೆಲುಬು: ಮೋದಿ
ತರಕಾರಿ ಮಾರಾಟಗಾರ, ಹಾಲುಮಾರಾಟಗಾರ, ನೇಕಾರರು, ಕುಶಲಕರ್ಮಿಗಳು ಪತ್ರಿಕೆ ಮಾರಾಟಗಾರರು ಮತ್ತು ಇತರೆ ಸಣ್ಣ ಉದ್ದಿಮೆಗಳೇ ಭಾರತದ ಆರ್ಥಿಕತೆಗೆ ಮುಖ್ಯ ಬೆನ್ನೆಲುಬಾಗಿದೆ ಎಂದು ಪ್ರಧಾನಮಂತ್ರಿ...

ನವದೆಹಲಿ: ತರಕಾರಿ ಮಾರಾಟಗಾರ, ಹಾಲುಮಾರಾಟಗಾರ, ನೇಕಾರರು, ಕುಶಲಕರ್ಮಿಗಳು ಪತ್ರಿಕೆ ಮಾರಾಟಗಾರರು ಮತ್ತು ಇತರೆ ಸಣ್ಣ ಉದ್ದಿಮೆಗಳೇ ಭಾರತದ ಆರ್ಥಿಕತೆಗೆ ಮುಖ್ಯ ಬೆನ್ನೆಲುಬಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಸಣ್ಣ ಉದ್ದಿಮೆ ಕುರಿತಂತೆ ಮಾ.31ಪ್ರಧಾನಮಂತ್ರಿ ನರೇಂದ್ರ ಮೋದಿ ಪತ್ರಬರೆದಿದ್ದರು. ಆ ಪತ್ರ ಇಂದು ಬಿಡುಗಡೆಗೊಂಡಿದ್ದು, ಪತ್ರದಲ್ಲಿ ಸಣ್ಣ ಉದ್ಯಮಕ್ಕೆ ಉತ್ತೇಜನ ನೀಡುವ ಮಾತುಗಳನ್ನು ಮೋದಿ ಹೇಳಿದ್ದು, ಸಣ್ಣ ಉದ್ದಿಮೆಗಾರರೇ ನಮ್ಮ ದೇಶದ ನಿಜವಾದ ಬೆನ್ನುಲುಬು. ಭಾರತ ಆರ್ಥಿಕತೆ ಅಭಿವೃದ್ಧಿಗೆ ಅವರು ನೀಡಿರುವ ಶಕ್ತಿ ಅಪಾರವಾಗಿರುವಂತಹದ್ದು. ಸಣ್ಣ ಉದ್ದಿಮೆಗಾರರ ಕೈ ಗಟ್ಟಿಯಾದರೆ ದೇಶವನ್ನು ಎತ್ತರಕ್ಕೆ ಹೋಗುವುದರಲ್ಲಿ ನನಗೆ ಸಂಶಯವೇ ಇಲ್ಲ. ನಿಮ್ಮ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಸಣ್ಣ ಉದ್ಯಮಗಳನ್ನು ಪ್ರಾರಂಭಿಸುವವರು ಬಹಳ ಸುಲಭವಾಗಿ ಪ್ರಾರಂಭಿಸಬಹುದು. ನಿಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗಳಿಗಾಗಿ, ಸರಕು ಸಾಮಾನುಗಳಿಗಾಗಿ ಸರ್ಕಾರದಿಂದ ಸಾಲ ತೆಗೆದುಕೊಂಡು ಮುಂದುವರೆಸುವ ಅವಕಾಶವನ್ನು ಸರ್ಕಾರ ನೀಡಿದೆ. ಈ ಸೌಲಭ್ಯದಲ್ಲಿ ಯಾವುದೇ ಅಧಿಕಾರಿಗಳ ಕಿರುಕುಳವಾಗಲಿ, ತೊಂದರೆಯಾಗಲಿ ಎದುರಾಗುವುದಿಲ್ಲವಾದ್ದರಿಂದ ನಿರ್ಭಯದಿಂದ ನಿಮ್ಮ ಉದ್ದಿಮೆಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಮುಂದಿನ ಜೀವನಕ್ಕಾಗಿ ನೀವು ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಗಟ್ಟಿಮಾಡಿಕೊಳ್ಳಬೇಕು. ಇದೊಂದು ಸಾಧ್ಯವಾದರೆ ದೇಶವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


