ಶೋಭಾ ಡೇ ವಿರುದ್ಧ ಮಹಾ ಖಂಡನೆ
ಲೇಖಕಿ ಶೋಭಾ ಡೇ ಟ್ವೀಟ್ ಗಳು ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ವಿಧಾನಸಭೆಯಲ್ಲಿ ಶಿವಸೇನೆ ನೇತೃತ್ವದಲ್ಲಿ...
ನವದೆಹಲಿ: ಲೇಖಕಿ ಶೋಭಾ ಡೇ ಟ್ವೀಟ್ ಗಳು ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ವಿಧಾನಸಭೆಯಲ್ಲಿ ಶಿವಸೇನೆ ನೇತೃತ್ವದಲ್ಲಿ ಬುಧವಾರ ಖಂಡನಾ ನಿಲುವಳಿ ಮಂಡಿಸಲಾಗಿದೆ.
ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರೈಂಟೈಮ್ ಅಂದರೆ ಸಂಜೆ 6ರಿಂದ 9ಗಂಟೆ ಅವಧಿಯಲ್ಲಿ ಕೇವಲ ಮರಾಠಿ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕೆಂಬ `ಮಹಾ' ಸರ್ಕಾರದ ಆದೇಶವನ್ನು ಶೋಭಾ ಡೇ ಟೀಕಿಸಿದ್ದರು. ಫಡ್ನವಿಸ್ ಅವರನ್ನು `ದಿಕ್ತಟ್ ವಾಲಾ', ಸರ್ಕಾರದ ಕ್ರಮವನ್ನು `ದಾದಾಗಿರಿ' ಎಂದು ಟ್ವಿಟರ್‍ನಲ್ಲಿ ತೀವ್ರವಾಗಿ ಟೀಕಿಸಿದ್ದರು.
ಆದರೆ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಹಾಗೂ ಶಿವಸೇನೆ ಮುಖಂಡರು ಶೋಭಾ ಡೇ ವಿರುದ್ಧ ಖಂಡನಾ ನಿಲುವಳಿ ಮಂಡಿಸಿದ್ದಾರೆ. ಶೋಭಾ ಡೇ ಟ್ವೀಟ್‍ಗಳು ಮಹಾರಾಷ್ಟ್ರದ ಜನತೆಯನ್ನು ಅವಮಾನಿಸಿದೆ ಎಂದು ಶಿವಸೇನೆ ಶಾಸಕ ಪ್ರತಾಪ್ ಸರನಾಯಕ್ ಹೇಳಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ರನ್ನು ಲೇವಡಿ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದೂ ಅವರು ಒತ್ತಾಯಿಸಿದ್ದಾರೆ.
ಶೋಭಾ ಡೇ ಟ್ವೀಟ್ ನಲ್ಲೇನಿದೆ?
`ಇನ್ಮೇಲೆ ಮಲ್ಟಿಪ್ಲೆಕ್ಸ್ ನಲ್ಲಿ ಪಾಪ್‍ಕಾರ್ನ್ ಮಾರುವ ಬದಲು ದಹಿ ಮಸಾಲೆ ಹಾಗೂ ವಡಾ ಪಾವ್ ಮಾರಬೇಕೆಂದು ಆದೇಶ ನೀಡಿದರೂ ಅಚ್ಚರಿಯಿಲ್ಲ. ಬೀಫ್ ಬ್ಯಾನ್ ಮಾಡಿದ ನಂತರ ಈಗ ಮುಖ್ಯಮಂತ್ರಿಗಳ ಕಣ್ಣು ಸಿನಿಮಾಗಳತ್ತ ಬಿದ್ದಿದೆ. ನಾವು ಪ್ರೀತಿಸೋ ಮಹಾರಾಷ್ಟ್ರ ಇದಲ್ಲ. ನಾವು ಯಾವ ಸಿನಿಮಾ ಯಾವ ಹೊತ್ತಿಗೆ ನೋಡಬೇಕು ಅನ್ನೋದು ನಮಗೆ ಬಿಟ್ಟದ್ದು. ಇದು ಮುಖ್ಯಮಂತ್ರಿಯ ದಾದಾಗಿರಿ.
ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಚರ್ಚಿಸದೆ ಏಕಾಏಕಿ ನಿರ್ಧರಿಸಿದ್ದು ತಪ್ಪು. ಹಾಗಿದ್ದಲ್ಲಿ ಮಲ್ಟಿಪ್ಲೆಕ್ಸ್ ಗಳಿಗೆ ಸರ್ಕಾರ ಸಹಾಯ ಧನವನ್ನೂ ಘೋಷಿಸಲಿ' ಎಂದು ಪ್ರತ್ಯೇಕ ಟ್ವೀಟ್ ಗಳಲ್ಲಿ ಬರೆದುಕೊಂಡಿರುವ ಶೋಭಾ ನಿಲುವಳಿ ಮಂಡಿಸಿದ್ದು ಗೊತ್ತಾಗುತ್ತಿದ್ದಂತೆ ನಾನು ಮರಾಠಿ ವಿರೋಧಿಯಲ್ಲ. ನಾನು ಮರಾಠಿ ಸಿನಿಮಾ ಮತ್ತು ಭಾಷೆ ಅಭಿಮಾನಿ ಎಂದು ಮತ್ತೊಂದು ಟ್ವೀಟ್ ಬಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

